ಅಂಜಲಿ ನಿಂಬಾಳ್ಕರ್ ಗೆ ಬಿ-ಫಾರಂ ವಿತರಿಸಿ ಆಶೀರ್ವದಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಅಂಜಲಿ ನಿಂಬಾಳ್ಕರ್ ಗೆ ಬಿ-ಫಾರಂ ವಿತರಿಸಿ ಆಶೀರ್ವದಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 06, 2024 | 6:45 PM

ಶಿವಕುಮಾರ್ ಅವರಿಂದ ಬಿ ಫಾರಂ ಪಡೆದ ಬಳಿಕ ಅಂಜಲಿ ಕೆಪಿಸಿಸಿ ಅಧ್ಯಕ್ಷನ ಕಾಲಿಗೆ ನಮಸ್ಕರಿಸುವುದನ್ನು ನೋಡಬಹುದು. ಶಿವಕುಮಾರ್ ಅಂಜಲಿಯವರ ತಲೆ ಮೇಲೆ ಕೈಯಿಟ್ಟು ಆಶೀರ್ವದಿಸುತ್ತಾರೆ. ನಂತರ ಅಂಜಲಿ ಶಿವಕುಮಾರ್ ಎಡಭಾಗದಲ್ಲಿದ್ದ ದೇವರ ಫೋಟೋಗಳಿಗೂ ಶಿರಬಾಗುತ್ತಾರೆ.

ಬೆಂಗಳೂರು: ಇಂದು ಕೋಲಾರದ ಮುಳುಬಾಗಿಲುನ ಕುರುಡುಮಲೆ ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಲೋಕಸಭಾ ಚುನಾವಣೆ ಪ್ರಚಾರ ಅಭಿಯಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರ ಹಲವಾರು ನಾಯಕರೊಂದಿಗೆ ಅಧಿಕೃತವಾಗಿ ಶುರುಮಾಡಿದ ಡಿಕೆ ಶಿವಕುಮಾರ್ (DK Shivakumar) ಮಧ್ಯಾಹ್ನದ ನಂತರ ಬೆಂಗಳೂರಿಗೆ ವಾಪಸ್ಸಾಗಿ ಕೆಪಿಸಿಸಿ ಕಚೇರಿಯಲ್ಲಿ ಕಾಯುತ್ತಿದ್ದ ಅಂಜಲಿ ನಿಂಬಾಳ್ಕರ್ (Anjali Nimbalkar) ಅವರಿಗೆ ಬಿ ಫಾರಂ ವಿತರಿಸಿದರು. ಅಂಜಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ (Uttara Kannada LS constituency) ಸ್ಪರ್ಧಿಸುತ್ತಿದ್ದು ಅವರ ಎದುರಾಳಿ ಬಿಜೆಪಿಯ ಮಾಜಿ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆಗಿದ್ದಾರೆ. ಇವರಿಬ್ಬರೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸೋತಿದ್ದರೆನ್ನುವುದು ವಿಷೇಶ. ಶಿವಕುಮಾರ್ ಅವರಿಂದ ಬಿ ಫಾರಂ ಪಡೆದ ಬಳಿಕ ಅಂಜಲಿ ಕೆಪಿಸಿಸಿ ಅಧ್ಯಕ್ಷನ ಕಾಲಿಗೆ ನಮಸ್ಕರಿಸುವುದನ್ನು ನೋಡಬಹುದು. ಶಿವಕುಮಾರ್ ಅಂಜಲಿಯವರ ತಲೆ ಮೇಲೆ ಕೈಯಿಟ್ಟು ಆಶೀರ್ವದಿಸುತ್ತಾರೆ. ನಂತರ ಅಂಜಲಿ ಶಿವಕುಮಾರ್ ಎಡಭಾಗದಲ್ಲಿದ್ದ ದೇವರ ಫೋಟೋಗಳಿಗೂ ಶಿರಬಾಗುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಪತ್ನಿ ಪರ ಹೇಮಂತ್ ನಿಂಬಾಳ್ಕರ್ ಕೆಲಸ ಆರೋಪ: ಚುನಾವಣಾ ಆಯೋಗಕ್ಕೆ ಬಿಜೆಪಿಯಿಂದ 4 ದೂರು