ದ್ವಾರಕೀಶ್ ಇನ್ನಿಲ್ಲ: ಮಂಕುತಿಮ್ಮನ ಅಗಲಿಕೆಯಿಂದ ಮಂಕಾದ ಕನ್ನಡನಾಡು, ಮೇರು ನಟರಿಗೂ ಗಾಡ್ ಫಾದರ್ ಆಗಿದ್ದ ಪ್ರಚಂಡ ಕುಳ್ಳ
ನಟ, ನಿರ್ಮಾಪಕ ದ್ವಾರಕೀಶ್ ಇನ್ನಿಲ್ಲ: ಖ್ಯಾತ ನಟ ದಿವಂಗತ ವಿಷ್ಣುವರ್ಧನ್ ರೊಂದಿಗೆ ದ್ವಾರಕೀಶ್ ಸ್ನೇಹ ಹಲವಾರು ಸೂಪರ್ ಹಿಟ್ ಸಿನಿಮಾಗಳಿಗೆ ಕಾರಣವಾಗಿತ್ತು. ಒಂದು ಜಮಾನಾದಲ್ಲಿ ವಿಷ್ಣು ಅವರಿಗೆ ಗಾಡ್ ಫಾದರ್ ನಂತಿದ್ದ ದ್ವಾರಕೀಶ್ ಅದ್ಯಾವುದೋ ಕಾರಣಕ್ಕೆ ಮುನಿಸಿಕೊಂಡು ದೂರವಾಗಿದ್ದರು. ಅದರೆ, ಕೆಲ ವರ್ಷಗಳ ನಂತರ ಅವರ ನಡುವಿನ ಮುನಿಸು ಮರೆಯಾಗಿ ಸ್ನೇಹದ ಎರಡನೇ ಇನ್ನಿಂಗ್ಸ್ ನಲ್ಲೂ ಬಾಕ್ಸಾಫೀಸನ್ನು ಕೊಳ್ಳೆಹೊಡೆದ ಸಿನಿಮಾಗಳು ಬಂದಿದ್ದವು.
ಬೆಂಗಳೂರು: ಆರು ದಶಕಗಳ ಕಾಲಕ್ಕೂ ಹೆಚ್ಚಿನ ಅವಧಿಯಿಂದ ಕನ್ನಡಿಗರು ಹೊಟ್ಟೆ ಹುಣ್ಣಾಗುವಂತೆ ನಟಿಸಿ, ಆಗಾಗ ಅಳಿಸಿ ಸ್ಯಾಂಡಲ್ ವುಡ್ ನ ಎಲ್ಲ ಮೇರುನಟರೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಂಡು ಕೆಲ ನಟರಿಗೆ ಗಾಡ್ ಫಾದರ್ ಕೂಡ (godfather) ಆಗಿ ಮತ್ತು ಕೆಲ ಪ್ರತಿಭೆಗಳನ್ನು ತಮ್ಮ ಸಿನಿಮಾಗಳ ಮೂಲಕ ಪರಿಚಯಿಸಿ ಕನ್ನಡ ಚಿತ್ರರಂಗ ದಿಗ್ಗಜರೆನಿಸಿಕೊಂಡಿದ್ದ ನಟ-ನಿರ್ಮಾಪಕ-ನಿರ್ದೇಶಕ ದ್ವಾರಕೀಶ್ (Dwarakish) ಕೊನೆಯುಸಿರೆಳೆದಿದ್ದಾರೆ. ಕೆಲ ಸಮಯದಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರಿಗೆ 81-ವರ್ಷ ವಯಸ್ಸಾಗಿತ್ತು. ದಶಕಗಳ ಕಾಲ ಹಾಸ್ಯನಟನಾಗಿ (comedian) ಕೆಲಸ ಮಾಡಿದ ಅವರು ನಂತರದ ದಿನಗಳಲ್ಲಿ ಕ್ಯಾರೆಕ್ಟರ್ ಪಾತ್ರಗಳಲ್ಲಿ ಮಿಂಚಿದರು ಮತ್ತು ತಮ್ಮ ಸಂಸ್ಥೆ ನಿರ್ಮಾಣನ ಕೆಲ ಚಿತ್ರಗಳಲ್ಲಿ ನಾಯಕ ನಟನಾಗಿಯೂ ಕಾಣಿಸಿಕೊಂಡರು. ಖ್ಯಾತ ನಟ ದಿವಂಗತ ವಿಷ್ಣುವರ್ಧನ್ ರೊಂದಿಗೆ ದ್ವಾರಕೀಶ್ ಸ್ನೇಹ ಹಲವಾರು ಸೂಪರ್ ಹಿಟ್ ಸಿನಿಮಾಗಳಿಗೆ ಕಾರಣವಾಗಿತ್ತು. ಒಂದು ಜಮಾನಾದಲ್ಲಿ ವಿಷ್ಣು ಅವರಿಗೆ ಗಾಡ್ ಫಾದರ್ ನಂತಿದ್ದ ದ್ವಾರಕೀಶ್ ಅದ್ಯಾವುದೋ ಕಾರಣಕ್ಕೆ ಮುನಿಸಿಕೊಂಡು ದೂರವಾಗಿದ್ದರು. ಅದರೆ, ಕೆಲ ವರ್ಷಗಳ ನಂತರ ಅವರ ನಡುವಿನ ಮುನಿಸು ಮರೆಯಾಗಿ ಸ್ನೇಹದ ಎರಡನೇ ಇನ್ನಿಂಗ್ಸ್ ನಲ್ಲೂ ಬಾಕ್ಸಾಫೀಸನ್ನು ಕೊಳ್ಳೆಹೊಡೆದ ಸಿನಿಮಾಗಳು ಬಂದಿದ್ದವು.
ಹಿರಿಯ ನಟನ ಅಂತ್ಯ ಆಗಿದ್ದು ಹೇಗೆ? ಮಗ ಯೋಗೇಶ್ ಹೇಳೋದೇನು?
ಅವರ ಅಂತ್ಯ ಹೇಗಾಯಿತು ಅನ್ನೋದನ್ನು ಪುತ್ರ ಯೋಗೇಶ್ ದ್ವಾರಕೀಶ್ ಟಿವಿ9 ಕನ್ನಡ ವಾಹಿನಿಗೆ ವಿವರಿಸಿದ್ದಾರೆ, ನಿನ್ನೆ ರಾತ್ರಿ ಅವರು ಭೇದಿಯಿಂದ ಬಳಲಿದರಂತೆ. ರಾತ್ರಿಯಿಡೀ ನಿದ್ದೆ ಮಾಡಿರದ ಹಿರಿಯ ನಟ ಬೆಳಗ್ಗೆ ಹಾಸಿಗೆಯಿಂದ ಎದ್ದು ಕಾಫಿ ಕುಡಿದು ಎರಡು ತಾಸು ನಿದ್ರೆ ಮಾಡ್ತೀನಿ ಅಮೇಲೆ ಎಬ್ಬಿಸು ಅಂತ ಮಗನಿಗೆ ಹೇಳಿದರಂತೆ. ಹಾಗೆ ಮಲಗಿದವರು ಮತ್ತೆ ಏಳಲೇ ಇಲ್ಲ ಅವರಿಗೆ ಹೃದಯಘಾತವಾಗಿತ್ತು ಎಂದು ಯೋಗೇಶ್ ಹೇಳಿದ್ದಾರೆ.
ದ್ವಾರಕೀಶ್ ಸಾವಿನಿಂದ ಕೇವಲ ಚಿತ್ರರಂಗ ಮಾತ್ರವಲ್ಲ, ರಾಜ್ಯದ ಕನ್ನಡಿಗರೆಲ್ಲ ಶೋಕಸಾಗರದಲ್ಲಿ ಮುಳುಗಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Dwarakish Death: ಸಿನಿಮಾದಲ್ಲಿ ಲಕ್ಷ ಲಕ್ಷ ಗಳಿಸಿದರೂ ದ್ವಾರಕೀಶ್ ಮನೆ ಮಾರಾಟ ಮಾಡಿದ್ದೇಕೆ? ಇಲ್ಲಿದೆ ಸತ್ಯ ಕಥೆ