ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು..ಆ ಪ್ರಸಂಗ ನೆನೆದು ಕಣ್ಣೀರಿಟ್ಟ ಮಹಿಳೆ

|

Updated on: Jan 08, 2025 | 10:03 PM

ದೂರು ನೀಡಲು ತಮ್ಮ ಕಚೇರಿಗೆ ಬಂದ ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿ ಜೈಲು ಸೇರಿಸಿರುವ ತುಮಕೂರು ಜಿಲ್ಲೆಯ ಮಧುಗಿರಿ ಉಪವಿಭಾಗದ 58 ವರ್ಷದ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್ಪಿ) ಎ. ರಾಮಚಂದ್ರಪ್ಪ ಜೈಲು ಪಾಲಾಗಿದ್ದಾರೆ. ಇನ್ನು ದೂರು ನೀಡಲು ತನ್ನ ಗಂಡನೊಂದಿಗೆ ಬಂದಿದ್ದ ಮಹಿಳೆಯನ್ನು ರಾಮಚಂದ್ರಪ್ಪ ಪುಸಲಾಯಿಸಿದ್ದಾರೆ. ಆಕೆಯ ಗಂಡನನ್ನು ಚಾಕ್ಲೇಟ್ ತರಲು ಕಳುಹಿಸಿ ತನ್ನ ಕೆಲಸ ಮುಂದುವರಿಸಿದ್ದಾನೆ.

ತುಮಕೂರು, (ಜನವರಿ 08): ಜಮೀನು ವಿವಾದ ಸಂಬಂಧ ಮಹಿಳೆ ತನ್ನ ಗಂಡನೊಂದಿಗೆ ಠಾಣೆಗೆ ದೂರು ನೀಡಲು ಬಂದಿದ್ದಾಳೆ. ಆದ್ರೆ, ಮಧುಗಿರಿ ಡಿವೈಎಸ್​ಪಿ ರಾಮಚಂದ್ರಪ್ಪ ಮಾಡಿದ್ದ ಕೆಲಸ ಇದೀಗ ಜಗಜ್ಜಾಹೀರು ಆಗಿದೆ. ಠಾಣೆಯಲ್ಲೇ ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿದ್ದು, ಆ ವಿಡಿಯೋ ವೈರಲ್ ಆಗಿದೆ. ಇನ್ನು ಮಹಿಳೆ ಜೊತೆ ಬಂದಿದ್ದ ಗಂಡನನ್ನು ರಾಮಚಂದ್ರಪ್ಪ ಚಾಕ್ಲೇಟ್ ತರಲು ಹೇಳಿ ಕಳುಹಿಸಿದ್ದಾದಂತೆ. ಬಳಿಕ ಮಹಿಳೆಯನ್ನು ರೂಮ್​ ಒಳಗೆ ಕರೆದುಕೊಂಡು ಹೋಗಿ ಈ ರೀತಿ ಮಾಡಿದ್ದಾನೆಂದು ಮಹಿಳೆ ಆರೋಪಿಸಿದ್ದಾಳೆ.

Published on: Jan 08, 2025 10:01 PM