ಮುರುಘಾ ಶ್ರೀಗಳ ಪರ ಸಲ್ಲಿಕೆಯಾಗಿರುವ ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲಾಗುವುದು: ಸಂತ್ರಸ್ತೆ ಪರ ವಕೀಲರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 01, 2022 | 3:01 PM

ಇಂದಷ್ಟೇ ಆರೋಪಿ ಪರ ಸಲ್ಲಿಸಲಾಗಿರುವ ಜಾಮೀನು ಅರ್ಜಿಯ ಪ್ರತಿ ಸಿಕ್ಕಿದೆ, ಅದನ್ನು ಅಧ್ಯಯನ ಮಾಡಿ ಕಾನೂನಿನ ಚೌಕಟ್ಟಿನೊಳಗೆ ಶ್ರೀಗಳಿಗೆ ಯಾಕೆ ನಿರೀಕ್ಷಣಾ ಜಾಮೀನು ನೀಡಬಾರದು ಅಂತ ಆಕ್ಷೇಪಣೆ ಸಲ್ಲಿಸುವುದಾಗಿ ಅವರು ಹೇಳಿದರು.

ಚಿತ್ರದುರ್ಗ:  ಮುರುಘಾಮಠದ ಶ್ರೀಗಳ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪರ ವಕೀಲರು ನಿರೀಕ್ಷಣಾ ಜಾಮೀನು (anticipatory bail) ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಸಂತ್ರಸ್ತೆ ಪರ ವಕೀಲರು (victim’s lawyer) ಶ್ರೀಗಳಿಗೆ ಜಾಮೀನು ನೀಡಬಾರದೆಂದು ಆಕ್ಷೇಪಣೆ (objection) ಸಲ್ಲಿಸುವುದಾಗಿ ಹೇಳಿದರು. ಚಿತ್ರದುರ್ಗದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತಾಡಿದ ಸಂತ್ರಸ್ತೆ ಪರ ವಕೀಲರು ಇಂದಷ್ಟೇ ಆರೋಪಿ ಪರ ಸಲ್ಲಿಸಲಾಗಿರುವ ಜಾಮೀನು ಅರ್ಜಿಯ ಪ್ರತಿ ಸಿಕ್ಕಿದೆ, ಅದನ್ನು ಅಧ್ಯಯನ ಮಾಡಿ ಕಾನೂನಿನ ಚೌಕಟ್ಟಿನೊಳಗೆ ಶ್ರೀಗಳಿಗೆ ಯಾಕೆ ನಿರೀಕ್ಷಣಾ ಜಾಮೀನು ನೀಡಬಾರದು ಅಂತ ಆಕ್ಷೇಪಣೆ ಸಲ್ಲಿಸುವುದಾಗಿ ಅವರು ಹೇಳಿದರು.