Loading video

Video: ನೀರಿನೊಂದಿಗೆ ಮನೆಯೊಳಗೆ ನುಗ್ಗಿದ ದೈತ್ಯ ಹೆಬ್ಬಾವು

|

Updated on: Jul 28, 2023 | 3:49 PM

ಪ್ರವಾಹದಿಂದ ಮನೆಯೊಂದರೊಳಗೆ ನೀರಿನೊಂದಿಗೆ ದೈತ್ಯ ಆಕಾರದ ಹೆಬ್ಬಾವೊಂದು ಬಂದಿರುವ ಘಟನೆ ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ನಡೆದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಹೆಬ್ಬಾವನ್ನು ರಕ್ಷಣೆ ಮಾಡಲಾಗಿದೆ

ಹೈದರಾಬಾದ್,ಜು.28: ದೇಶದ ಅನೇಕ ಕಡೆ ಭಾರೀ ಮಳೆಯಾಗುತ್ತಿದ್ದು, ಇದೀಗ ತೆಲಂಗಾಣ(Telangana) ಹಲವು ಭಾಗಗಳಲ್ಲಿ ಜೋರಾಗಿ ಮಳೆ ಸುರಿಯುತ್ತಿದೆ. ಇಲ್ಲಿನ ಕೆಲವೊಂದು ಕಡೆ ಪ್ರವಾಹ ಉಂಟಾಗಿದ್ದು, ಈ ಪ್ರವಾಹದಲ್ಲಿ ಮೋಟರ್‌ಬೈಕ್‌ ಕೊಚ್ಚಿಕೊಂಡು ಹೋಗಿದೆ. ಹತ್ತಾರು ಮನೆಗಳಿಗೆ ನೀರು ನುಗ್ಗಿದೆ.  ಇನ್ನೂ ಪ್ರವಾಹದಿಂದ ಮನೆಯೊಂದರೊಳಗೆ ನೀರಿನೊಂದಿಗೆ ದೈತ್ಯ ಆಕಾರದ ಹೆಬ್ಬಾವೊಂದು ಬಂದಿರುವ ಘಟನೆ ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ನಡೆದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಸ್ಥಳೀಯರೊಂದಿಗೆ ಸೇರಿ ಹೆಬ್ಬಾವನ್ನು ರಕ್ಷಣೆ ಮಾಡಲಾಗಿದೆ. ಇದೀಗ ವಿಡಿಯೋ ಎಲ್ಲ ಕಡೆ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಮನೆಯಲ್ಲಿದ್ದ ಬೃಹತ್ ಆಕಾರ ಹೆಬ್ಬಾವನ್ನು ಹೊರಗೆ ತೆರೆಯವುದನ್ನು ನೋಡಬಹುದು. ಇಂತಹದೇ ಮತ್ತೊಂದು ಘಟನೆ ತೆಲಂಗಾಣದ ಪ್ರಕಾಶ್ ನಗರ ಪ್ರದೇಶದಲ್ಲಿ ನಡೆದಿದೆ. ಸುರಿಯುತ್ತಿದ್ದ ಭಾರೀ ಮಳೆಯಿಂದ ತಪ್ಪಿಸಿಕೊಳ್ಳಲು ಕಾಡಾನೆಯೊಂದು ಮನೆಯೊಳಗೆ ನುಗ್ಗಿದೆ. ಈ ವಿಡಿಯೋ ಕೂಡ ಭಾರೀ ವೈರಲ್ ಆಗಿತ್ತು. ​​

Published on: Jul 28, 2023 03:42 PM