ವಿಡಿಯೋ: ಜಗಳೂರು ಪಟ್ಟಣದಲ್ಲಿ ಕುಡಿತ ಬಿಡಿಸಲು ನಡೆದ ಮದ್ಯವರ್ಜನ ಶಿಬಿರದಲ್ಲಿ ಶಾಸಕ ಬಿ. ದೇವೇಂದ್ರಪ್ಪ ಏನು ಮಾಡಿದರು ನೋಡಿ!
ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆ ವತಿಯಿಂದ ಮದ್ಯವರ್ಜನ ಶಿಬಿರ ಆಯೋಜಿಸಲಾಗಿತ್ತು. ಜಗಳೂರು ಕ್ಷೇತ್ರದ ಶಾಸಕ ಬಿ. ದೇವೇಂದ್ರಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಿ, ಬಳಿಕ ಕೆಲ ಹೊತ್ತು ಜಾನಪದ ಕಲಾವಿದರ ಜೊತೆ ಭಜನೆ ಮಾಡಿದರು.
ಭಾನುವಾರ ಬಂದರೆ ಸಾಕು ಶಾಸಕ ಬಿ. ದೇವೇಂದ್ರಪ್ಪ (Jagaluru Congress MLA B. Devendrappa) ತಮ್ಮ ಸ್ವಕ್ಷೇತ್ರದಲ್ಲಿ ಏನಾದರೊಂದು ಜನಪರ ಕಾರ್ಯಕ್ರಮದಲ್ಲಿ ತನ್ಮಯರಾಗಿ ಪಾಲ್ಗೊಳ್ಳುತ್ತಾರೆ. ಅದು ಅಧಿಕಾರಯುತವಾಗಿ ಸರ್ಕಾರಿ ಜವಾಬ್ದಾರಿಯನ್ನಷ್ಟೇ ನಿಭಾಯಿಸಬೇಕು ಅಂತಲ್ಲ. ಯಾವುದೇ ಜನಪತರ ಕಾಳಜಿಯುಳ್ಳ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಶಾಸಕನಾಗಿ ತಮ್ಮ ಸಾಮಾಜಿಕ ಕಳಕಳಿ ಏನೆಂಬುದನ್ನು ತೋರಿಸಿಕೊಡುತ್ತಾರೆ.
ಇತ್ತೀಚಿಗೆ ಕುಡುಕರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗೆ ಕುಡಿತ ಬಿಡಿಸಲು ಹತ್ತಾರು ಕಾರ್ಯಕ್ರಮಗಳು ನಡೆಯುತ್ತಿವೆ. ಇದೇ ರೀತಿ ಮದ್ಯವರ್ಜನ ಶಿಬಿರವೊಂದು (De addiction of Alcoholism camp) ಜಗಳೂರಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಭಜನೆ ಮಾಡಿದ (Bhajans) ಸ್ಥಳೀಯ ಕಾಂಗ್ರೆಸ್ ಶಾಸಕ ಬಿ. ದೇವೇಂದ್ರಪ್ಪ ಕೆಲ ಹೊತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಜಗಳೂರು ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ನಡೆದ ಮದ್ಯ ವರ್ಜನ ಶಿಬಿರ ಇದಾಗಿತ್ತು.
ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆ ವತಿಯಿಂದ ಮದ್ಯವರ್ಜನ ಶಿಬಿರ ಆಯೋಜಿಸಲಾಗಿತ್ತು. ಜಗಳೂರು ಕ್ಷೇತ್ರದ ಶಾಸಕ ಬಿ. ದೇವೇಂದ್ರಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಿ, ಬಳಿಕ ಕೆಲ ಹೊತ್ತು ಜಾನಪದ ಕಲಾವಿದರ ಜೊತೆ ಭಜನೆ ಮಾಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ