Video: ಕಾರು ಗುದ್ದಿದ್ದಕ್ಕೆ ನಾಯಿ ರಿವೇಂಜ್ ತೀರಿಸಿಕೊಂಡಿದ್ಹೇಗೆ ನೋಡಿ
ಕಾರೊಂದು ನಾಯಿಗೆ ಡಿಕ್ಕಿ ಹೊಡೆದಿದ್ದು, ಅದರ ಪ್ರತೀಕಾರವಾಗಿ ನಾಯಿ ತನ್ನ ಸ್ನೇಹಿತನ ಜತೆ ಸೇರಿ ಕಾರನ್ನು ಸ್ಕ್ರ್ಯಾಚ್ ಮಾಡಿರುವ ಘಟನೆ ಮಧ್ಯಪ್ರದೇಶದ ಸಾಗರ್ನಲ್ಲಿ ನಡೆದಿದೆ. ಪ್ರಾಣಿಗಳ ಆಶ್ಚರ್ಯಕರ ನಡೆಯು ಜನರ ಗಮನ ಸೆಳೆದಿದೆ. ಸಾಗರ್‌ನ ತಿರುಪತಿ ಪುರಂ ಕಾಲೋನಿಯ ನಿವಾಸಿ ಪ್ರಹ್ಲಾದ್ ಸಿಂಗ್ ಘೋಷಿ ಅವರು ತಮ್ಮ ಕುಟುಂಬದೊಂದಿಗೆ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಮದುವೆಗೆ ತೆರಳುತ್ತಿದ್ದಾಗ ಅವರ ಕಾರು ಆಕಸ್ಮಿಕವಾಗಿ ಅವರ ಮನೆಯಿಂದ ಸುಮಾರು 500 ಮೀಟರ್ ದೂರದಲ್ಲಿ ನಾಯಿಯೊಂದಕ್ಕೆ ಡಿಕ್ಕಿ ಹೊಡೆದಿದೆ. ನಾಯಿಗೇನು ಗಾಯಗಳಾಗಿರಲಿಲ್ಲ, ಬೊಗಳುತ್ತಾ ಸ್ವಲ್ಪ ದೂರ ಹಿಂಬಾಲಿಸಿ ಮರೆಯಾಗಿತ್ತು.
ಕಾರೊಂದು ನಾಯಿಗೆ ಡಿಕ್ಕಿ ಹೊಡೆದಿದ್ದು, ಅದರ ಪ್ರತೀಕಾರವಾಗಿ ನಾಯಿ ತನ್ನ ಸ್ನೇಹಿತನ ಜತೆ ಸೇರಿ ಕಾರನ್ನು ಸ್ಕ್ರ್ಯಾಚ್ ಮಾಡಿರುವ ಘಟನೆ ಮಧ್ಯಪ್ರದೇಶದ ಸಾಗರ್ನಲ್ಲಿ ನಡೆದಿದೆ. ಪ್ರಾಣಿಗಳ ಆಶ್ಚರ್ಯಕರ ನಡೆಯು ಜನರ ಗಮನ ಸೆಳೆದಿದೆ.
ಸಾಗರ್‌ನ ತಿರುಪತಿ ಪುರಂ ಕಾಲೋನಿಯ ನಿವಾಸಿ ಪ್ರಹ್ಲಾದ್ ಸಿಂಗ್ ಘೋಷಿ ಅವರು ತಮ್ಮ ಕುಟುಂಬದೊಂದಿಗೆ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಮದುವೆಗೆ ತೆರಳುತ್ತಿದ್ದಾಗ ಅವರ ಕಾರು ಆಕಸ್ಮಿಕವಾಗಿ ಅವರ ಮನೆಯಿಂದ ಸುಮಾರು 500 ಮೀಟರ್ ದೂರದಲ್ಲಿ ನಾಯಿಯೊಂದಕ್ಕೆ ಡಿಕ್ಕಿ ಹೊಡೆದಿದೆ. ನಾಯಿಗೇನು ಗಾಯಗಳಾಗಿರಲಿಲ್ಲ, ಬೊಗಳುತ್ತಾ ಸ್ವಲ್ಪ ದೂರ ಹಿಂಬಾಲಿಸಿ ಮರೆಯಾಗಿತ್ತು.
ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಘೋಷಿ ಮನೆಗೆ ಹಿಂದಿರುಗಿದ್ದರು, ಕಾರನ್ನು ಹೊರಗಡೆ ನಿಲ್ಲಿಸಲಾಗಿತ್ತು, ನಾಯಿ ಕಾರಿನತ್ತ ಬಂದು ಬೇರೆ ನಾಯಿಯನ್ನು ಕರೆದುಕೊಂಡು ಬಂದು ಸಂಪೂರ್ಣವಾಗಿ ಸ್ಕ್ರ್ಯಾಚ್ ಮಾಡಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಗೀರುಗಳನ್ನು ಸರಿ ಮಾಡಲು 15 ಸಾವಿರ ರೂ. ಪಾವತಿಸುವಂತಾಯಿತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ