Video: ಅಯೋಧ್ಯೆ ರಾಮಮಂದಿರ ಹೇಗಿದೆ ನೋಡಿ? ಇದು ಭೂಲೋಕದ ಸ್ವರ್ಗ

Video: ಅಯೋಧ್ಯೆ ರಾಮಮಂದಿರ ಹೇಗಿದೆ ನೋಡಿ? ಇದು ಭೂಲೋಕದ ಸ್ವರ್ಗ

ಅಕ್ಷಯ್​ ಪಲ್ಲಮಜಲು​​
|

Updated on:Jan 10, 2024 | 6:20 PM

ರಾತ್ರಿ ಹೊತ್ತಿನಲ್ಲಿ ರಾಮಮಂದಿರ ಹೇಗೆ ಕಾಣುತ್ತದೆ ಎಂಬ ಬಗ್ಗೆ ಒಂದು ವಿಡಿಯೋವನ್ನು ರಾಮಜನ್ಮ ಭೂಮಿ ಟ್ರಸ್ಟ್​​ ಹಂಚಿಕೊಂಡಿದೆ. ಜಟಾಯು ಹಿಂದೂ ಮಹಾಕಾವ್ಯ ರಾಮಾಯಣದಲ್ಲಿ ಮಹತ್ವದ ಪಾತ್ರವಾಗಿದ್ದು, ರಾಕ್ಷಸ ರಾಜ ರಾವಣನ ಹಿಡಿತದಿಂದ ಸೀತೆಯನ್ನು ರಕ್ಷಿಸಲು ಪ್ರಯತ್ನಿಸುವಾಗ ಜಟಾಯು ತನ್ನ ಪ್ರಾಣ ತ್ಯಾಗವನ್ನು ಮಾಡಿತ್ತು. ಇದರ ಸಂಕೇತವಾಗಿ ಮಂದಿರ ಮುಂಭಾಗದಲ್ಲಿ ಇದನ್ನು ಸ್ಥಾಪಿಸಲಾಗಿದೆ.

ಅಯೋಧ್ಯೆ ರಾಮಮಂದಿರ ಜನವರಿ 22ಕ್ಕೆ ಉದ್ಘಾಟನೆಗೊಳ್ಳಲಿದೆ. ಸಹಸ್ರ ಸಹಸ್ರ ರಾಮಭಕ್ತರು ಈ ಕ್ಷಣಕ್ಕೆ ಕಾಯುತ್ತಿದ್ದಾರೆ. ಈಗಾಗಲೇ ಅಲ್ಲಿನ ಹಲವು ಕೆಲಸಗಳು ಪೂರ್ಣಗೊಂಡಿದ್ದು, ಲೋರ್ಕಾಪಣೆಗೆ ಸಿದ್ಧವಾಗಿದೆ. ಅಯೋಧ್ಯೆಗೆ ಬೇರೆ ಬೇರೆ ರಾಜ್ಯಗಳ ಕೊಡುಗೆ ಅಪಾರ, ಅದರಲ್ಲೂ ಕರ್ನಾಟಕ ಹೆಚ್ಚಿನ ಕೊಡುಗೆ ನೀಡಿದೆ. ರಾಮಲಲ್ಲಾನ ಪ್ರಾಣ ಪ್ರತಿಷ್ಠೆಗೆ ಆಯ್ಕೆ ಆಗಿರುವ ಮೂರ್ತಿಯನ್ನು ಕೆತ್ತಿದ್ದು ನಮ್ಮ ಮೈಸೂರಿನವರು. ಇದೀಗ ಅಲ್ಲಿನ ನಿರ್ಮಾಣ ಕಾರ್ಯ ಪೂರ್ಣಗೊಳುತ್ತಿದೆ. ರಾತ್ರಿ ಹೊತ್ತಿನಲ್ಲಿ ರಾಮಮಂದಿರ ಹೇಗೆ ಕಾಣುತ್ತದೆ ಎಂಬ ಬಗ್ಗೆ ಒಂದು ವಿಡಿಯೋವನ್ನು ರಾಮಜನ್ಮ ಭೂಮಿ ಟ್ರಸ್ಟ್​​ ಹಂಚಿಕೊಂಡಿದೆ. ಇದು ಭೂಲೋಕದ ಸ್ವರ್ಗದಂತೆ ಕಾಣಿಸುತ್ತದೆ. ಒಂದು ಭಾರೀ ರಾಮಾಯಣದ ಕಥೆಗಳನ್ನು ಇಲ್ಲಿನ ಕೆತ್ತನೆಗಳು ಮೇಲುಕು ಹಾಕುವಂತಿದೆ. ಜಟಾಯು ಹಿಂದೂ ಮಹಾಕಾವ್ಯ ರಾಮಾಯಣದಲ್ಲಿ ಮಹತ್ವದ ಪಾತ್ರವಾಗಿದ್ದು, ರಾಕ್ಷಸ ರಾಜ ರಾವಣನ ಹಿಡಿತದಿಂದ ಸೀತೆಯನ್ನು ರಕ್ಷಿಸಲು ಪ್ರಯತ್ನಿಸುವಾಗ ಜಟಾಯು ತನ್ನ ಪ್ರಾಣ ತ್ಯಾಗವನ್ನು ಮಾಡಿತ್ತು. ಇದರ ಸಂಕೇತವಾಗಿ ಮಂದಿರ ಮುಂಭಾಗದಲ್ಲಿ ಇದನ್ನು ಸ್ಥಾಪಿಸಲಾಗಿದೆ. ಮುಖ್ಯ ಗರ್ಭಗುಡಿಯಲ್ಲಿ ಶ್ರೀರಾಮ ಲಲ್ಲಾನ ವಿರಾಜಮಾನಾಗಿರುತ್ತಾನೆ. ಮಂದಿರದ ಎರಡನೇ ಮಹಡಿಯಲ್ಲಿ ರಾಮನ ಕುಟುಂಬದ ಮೂರ್ತಿಗಳು ಇರುತ್ತದೆ. ಮಂದಿರದ ಸಂಕೀರ್ಣದಲ್ಲಿ ಮಾತಾ ಶಬರಿ, ಮಾತಾ ಅನ್ನಪೂರ್ಣ, ಹನುಮಾನ್, ಮಹರ್ಷಿ ಅಗಸ್ತ್ಯ, ಮಹರ್ಷಿ ವಾಲ್ಮೀಕಿ, ಮಹರ್ಷಿ ವಿಶ್ವಾಮಿತ್ರ ಮತ್ತು ನಿಶಾದ್ ರಾಜ್ ಮತ್ತು ದೇವಿ ಅಹಲ್ಯಾಳ ಜತೆಗೆ ಸೀತೆಯ ಮೂರ್ತಿಗಳು ಇರುತ್ತದೆ. ಇನ್ನು ರಾಮ ಜನ್ಮಭೂಮಿ ಮಂದಿರದ ಪ್ರವೇಶ ದ್ವಾರದಲ್ಲಿ ಭಗವಾನ್ ಹನುಮಾನ, ಭಗವಾನ್ ಗರುಡ, ಆನೆ ಮತ್ತು ಸಿಂಹದ ಕೆತ್ತನೆಗಳು ಇದೆ. ರಾಜಸ್ಥಾನದ ಬಂಸಿ ಪಹಾರ್‌ಪುರ ಗ್ರಾಮದಿಂದ ಪಡೆದ ಗುಲಾಬಿ ಮರಳುಗಲ್ಲಿನಿಂದ ಈ ಶಿಲ್ಪಗಳನ್ನು ಮಾಡಲಾಗಿದೆ. ಶ್ರೀ ರಾಮ ಜನ್ಮಭೂಮಿ ಮಂದಿರವನ್ನು ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು 380 ಅಡಿ ಉದ್ದ, 250 ಅಡಿ ಅಗಲ ಮತ್ತು 161 ಅಡಿ ಎತ್ತರವಿದೆ. 5 ಸಭಾಂಗಣಗಳನ್ನು ಹೊರತುಪಡಿಸಿ ಒಟ್ಟು 392 ಕಂಬಗಳು ಮತ್ತು 44 ಬಾಗಿಲುಗಳನ್ನು ಹೊಂದಿದೆ. ಈ 5 ಸಭಾಂಗಣದಲ್ಲಿ ನೃತ್ಯ ಮಂಟಪ, ರಂಗ ಮಂಟಪ, ಸಭಾ ಮಂಟಪ, ಪ್ರಾರ್ಥನಾ ಮತ್ತು ಕೀರ್ತನ ಮಂಟಪ ಇದೆ. ಮಂದಿರವು 732 ಮೀಟರ್ ಉದ್ದ ಮತ್ತು 14 ಅಡಿ ಅಗಲವಿರುವ ಆಯತಾಕಾರದ ಕಾಂಪೌಂಡ್ ಗೋಡೆಯಿಂದ ಆವೃತವಾಗಿದೆ. ದೇವಾಲಯದ ಆವರಣದ ನಾಲ್ಕು ಮೂಲೆಗಳಲ್ಲಿ ನಾಲ್ಕು ಮಂದಿರಗಳಿವೆ. ಸೂರ್ಯ ದೇವ, ದೇವಿ ಭಗವತಿ, ಗಣಪತಿ ಹಾಗೂ ಶಿವನಿಗೆ ಪ್ರತ್ಯೇಕ ಪ್ರತ್ಯೇಕ ಮಂದಿರಗಳನ್ನು ಹೊಂದಿದೆ. ಉತ್ತರ ಭಾಗದಲ್ಲಿ ದೇವಿ ಅನ್ನಪೂರ್ಣೆಗೆ ಸಮರ್ಪಿತವಾದ ದೇವಾಲಯ ಮತ್ತು ದಕ್ಷಿಣದ ತೋಳಿನಲ್ಲಿ ಹನುಮನಿಗೆ ದೇವಾಲಯಗಳನ್ನು ನಿರ್ಮಾಣ ಮಾಡಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jan 10, 2024 06:19 PM