ನಲ್ಲಿಯಲ್ಲಿ ನೀರು ಕುಡಿದ ಕಾಡಾನೆ; ವೈರಲ್ ವಿಡಿಯೋ ನೋಡಿ
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯ ವ್ಯಾಪ್ತಿಯ ಬಂಡೀಪುರದ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಕಾಡಾನೆ ನಲ್ಲಿಯಲ್ಲಿ ನೀರು ಕುಡಿದಿದೆ.
ಸೋಶಿಯಲ್ ಮೀಡಿಯಾದಲ್ಲಿ (Social Media) ದಿನಕ್ಕೆ ಹತ್ತಾರು ವಿಡಿಯೋಗಳು ವೈರಲ್ (Viral) ಆಗುತ್ತವೆ. ಕೆಲ ವಿಡಿಯೋ ತೀರಾ ತಮಾಷೆಯಾಗಿರುತ್ತವೆ. ಇನ್ನು ಕೆಲ ವಿಡಿಯೋ ಅಪರೂಪದ್ದಾಗಿರುತ್ತದೆ. ಕೆಲವೊಮ್ಮೆ ವೈರಲ್ ಆಗುವ ವಿಡಿಯೋಗಳು ಚರ್ಚೆಗೆ ಕಾರಣವಾಗಬಹುದು. ಆದರೆ ಇದು ಚರ್ಚೆಗೆ ಕಾರಣವಾಗಿರುವ ವಿಡಿಯೋ ಅಲ್ಲ. ಕಾಡಾನೆಯೊಂದು ನಲ್ಲಿಯಲ್ಲಿ ನೀರು ಕುಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ಯ ಹರಿದಾಡುತ್ತಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯ ವ್ಯಾಪ್ತಿಯ ಬಂಡೀಪುರದ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಕಾಡಾನೆ ನಲ್ಲಿಯಲ್ಲಿ ನೀರು ಕುಡಿದಿದೆ. ದೇವಾಲಯದ ನೀರಿನ ಕೊಳವೆಯಲ್ಲಿ ಆನೆ ನೀರು ಕುಡಿದಿದ್ದು, ಪ್ರವಾಸಿಗರ ಮೊಬೈಲ್ನಲ್ಲಿ ದೃಶ್ಯ ಸೆರೆಯಾಗಿದೆ.
ಇದನ್ನೂ ಓದಿ: ಐಕ್ಯೂಯಿಂದ ದಿಢೀರ್ ನಿಯೋ 6 5G ಹೊಸ ವೇರಿಯೆಂಟ್ ಲಾಂಚ್: ಬೆಲೆ ಎಷ್ಟು?, ಏನು ವಿಶೇಷತೆ?