Viral Video: ಈ ಪುಟ್ಟ ಬಾಲಕನ ವಿಡಿಯೊ ನೋಡಿ, ನಿಮ್ಮ ಮನ ಮಿಡಿಯಬಹುದು

ಹೃದಯ ಶಸ್ತ್ರಚಿಕಿತ್ಸೆಯ ನಂತರ ಪುಟ್ಟ ಬಾಲಕನೊಬ್ಬ ಆತನ ತಾಯಿಯ ಬಳಿ ಸಾಗುವ ವಿಡಿಯೊವೊಂದು ಎಲ್ಲರ ಮನಗೆದ್ದಿದೆ. ತಾಯಿ ಮಗನ ಈ ಒಲುಮೆಯ ಬಾಂಧವ್ಯ ನೆಟ್ಟಿಗರ ಮುಖದಲ್ಲಿ ಸಾರ್ಥಕತೆಯ ಭಾವ ಮೂಡಿಸಿದೆ.

Viral Video: ಈ ಪುಟ್ಟ ಬಾಲಕನ ವಿಡಿಯೊ ನೋಡಿ, ನಿಮ್ಮ ಮನ ಮಿಡಿಯಬಹುದು
ಪುಟ್ಟ ಬಾಲಕ ತಾಯಿಯ ಬಳಿ ಸಾಗುತ್ತಿರುವ ಚಿತ್ರ
Edited By:

Updated on: Jul 14, 2021 | 5:27 PM

ಆಸ್ಪತ್ರೆಗಳಿಗೆ ಭೇಟಿ ನೀಡದೆ ತಮ್ಮ ಜೀವನವನ್ನು ನಡೆಸುವುವರು ಎಷ್ಟು ಅದೃಷ್ಟಶಾಲಿಗಳು ಎಂಬ ಸತ್ಯವನ್ನು ಅರಿತುಕೊಳ್ಳದೆ ಹೆಚ್ಚಿನ ಜನರು ಸಣ್ಣ ಸಮಸ್ಯೆಗಳ ಬಗ್ಗೆ ಯೋಚಿಸಿ ತುಂಬಾ ಸಮಯವನ್ನು ಕಳೆಯುತ್ತಾರೆ. ಆದರೆ ಅಂಬೆಗಾಲಿಡುವ ಒಂದು ಪುಟ್ಟ ಮಗುವು ಹೃದಯ ಶಸ್ತ್ರಚಿಕಿತ್ಸೆಯ ನಂತರ ಮೊದಲ ಬಾರಿಗೆ ನಡೆಯುತ್ತಿರುವ ಈ ವಿಡಿಯೊ ನಮ್ಮ ಅದೃಷ್ಟದ ಸೂಕ್ಷ್ಮ ಜ್ಞಾಪನೆಯಾಗಿದೆ. ತೊದಲು ನುಡಿಯನ್ನು ಕಲಿಯಬೇಕಾದ ಪುಟ್ಟ ವಯಸ್ಸಿನಲ್ಲಿ, ಈ ಮಗುವು ಬಹುದೊಡ್ಡ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಆದರೆ ಅದು ಆ ಮಗುವಿನ ಚೈತನ್ಯವನ್ನು ಕಸಿದುಕೊಳ್ಳಲಿಲ್ಲ. ಅವನು ಎಲ್ಲಾ ಸಮಸ್ಯೆಗಳ ವಿರುದ್ದ ಹೋರಾಡಿ ಅವನ ಕಾಲುಗಳ ಮೇಲೆ ನಿಂತುಕೊಂಡ. ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಈ ಹೃದಯಸ್ಪರ್ಶಿ ವಿಡಿಯೊ, ಅಂಬೆಗಾಲಿಡುವ ಮಗು ಹೃದಯ ಶಸ್ತ್ರಚಿಕಿತ್ಸೆಯ ನಂತರ ತನ್ನ ಮೊದಲ ಹೆಜ್ಜೆಗಳನ್ನು ಇಡುವುದನ್ನು ಒಳಗೊಂಡಿದೆ.

ಅಂತರ್ಜಾಲದಲ್ಲಿ ಹೊರಹೊಮ್ಮಿದ ಪುಟ್ಟ ಹುಡುಗನ ಮುದ್ದಾದ ವಿಡಿಯೊವೊಂದು ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದ್ದಲ್ಲದೇ, ಎಲ್ಲರ ಅಂತಃಕರಣವನ್ನು ತಟ್ಟಿದೆ. ನಿಮಗೂ ಅಂಥದ್ದೇ ಅನುಭವವಾಗಬಹುದು. ಆಸ್ಪತ್ರೆಯೊಂದರಲ್ಲಿ ಸೆರೆಹಿಡಿಯಲಾದ ಈ ವಿಡಿಯೋದಲ್ಲಿ ಪುಟ್ಟ ಬಾಲಕನೊಬ್ಬ ಕಾಣಿಸಿಕೊಂಡಿದ್ದು, ಹೃದಯ ಶಸ್ತ್ರಚಿಕಿತ್ಸೆಯ ನಂತರ ತನ್ನ ಮೊದಲ ಹೆಜ್ಜೆಗಳನ್ನು ಇಟ್ಟುಕೊಂಡು ತನ್ನ ತಾಯಿಯತ್ತ ನಡೆಯುತ್ತಾನೆ. ಅಲ್ಲಿದ್ದ ನರ್ಸ್ ಹುಡುಗನಿಗೆ ತನ್ನ ತಾಯಿಯತ್ತ ನಡೆಯಲು ಸಹಾಯ ಮಾಡಿದರು. ನಂತರ ಆ ಪುಟ್ಟ ಮಗುವು ತನ್ನ ತಾಯಿಯನ್ನು ಪ್ರೀತಿಯಿಂದ ಅಪ್ಪಿಕೊಂಡಿತು.

ಹೃದಯ ಶಸ್ತ್ರಚಿಕಿತ್ಸೆಯ ನಂತರ ತನ್ನ ಮೊದಲ ಹೆಜ್ಜೆಗಳನ್ನು ತೆಗೆದುಕೊಳ್ಳುವ ಈ ಪುಟ್ಟ ಕಂದಮ್ಮನು ಯಾರ ಮುಖದಲ್ಲೂ ಮಂದಹಾಸ ತರಬಹುದು ಎಂಬ ಶೀರ್ಷಿಕೆ ನೀಡಿ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ.

ಈ ಕಿರು ಕ್ಲಿಪ್ ಅನ್ನು ಟ್ವಿಟರ್‌ಗೆ @ ಹಾಪ್‌ಕಿನ್ಸ್ ಬಿಆರ್‌ಎಫ್‌ಸಿ 21 ಎಂಬ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು ವೈರಲ್ ಆಗಿದೆ. ಅನೇಕರು ಈ ಚಿಕ್ಕ ಬಾಲಕ “ಧೈರ್ಯಶಾಲಿ,” ಎಂದು ಕಾಮೆಂಟ್ ಮಾಡಿದ್ದಾರೆ.

(Video of Little boy takes his first steps towards mother after big heart operation goes viral in twitter)