ಬ್ರೆಜಿಲ್​ನಲ್ಲಿ ಮಂತ್ರ-ಘೋಷಗಳೊಂದಿಗೆ ಪ್ರಧಾನಿ ಮೋದಿಗೆ ಸ್ವಾಗತ

ಬ್ರೆಜಿಲ್​ನಲ್ಲಿ ಮಂತ್ರ-ಘೋಷಗಳೊಂದಿಗೆ ಪ್ರಧಾನಿ ಮೋದಿಗೆ ಸ್ವಾಗತ

ನಯನಾ ರಾಜೀವ್
|

Updated on:Nov 18, 2024 | 10:41 AM

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೊದಲ ನೈಜೀರಿಯಾ ಭೇಟಿಯನ್ನು ಭಾನುವಾರ ಪೂರ್ಣಗೊಳಿಸಿದ್ದಾರೆ. ಇಂದು ಸೋಮವಾರ ಅವರು ಬ್ರೆಜಿಲ್ ತಲುಪಿದ್ದಾರೆ. ಇಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಬ್ರೆಜಿಲ್ ತಲುಪಿದ ಬಳಿಕ ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರಧಾನಿ ಮೋದಿಯನ್ನು ಸಂಸ್ಕೃತದ ಮಂತ್ರಘೋಷಗಳೊಂದಿಗೆ ಬರಮಾಡಿಕೊಳ್ಳಲಾಯಿತು.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೊದಲ ನೈಜೀರಿಯಾ ಭೇಟಿಯನ್ನು ಭಾನುವಾರ ಪೂರ್ಣಗೊಳಿಸಿದ್ದಾರೆ. ಇಂದು ಸೋಮವಾರ ಅವರು ಬ್ರೆಜಿಲ್ ತಲುಪಿದ್ದಾರೆ. ಇಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಬ್ರೆಜಿಲ್ ತಲುಪಿದ ಬಳಿಕ ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಧಾನಿ ಮೋದಿಯನ್ನು ಸಂಸ್ಕೃತದ ಮಂತ್ರಘೋಷಗಳೊಂದಿಗೆ ಬರಮಾಡಿಕೊಳ್ಳಲಾಯಿತು.

ಹೋಟೆಲ್​ನಲ್ಲಿ ದಾಂಡಿಯಾ ನೃತ್ಯ ಪ್ರದರ್ಶಿಸಲಾಯಿತು, ಸಂಪ್ರದಾಯಿಕ ಗುಜರಾತಿ ಉಡುಪು ಧರಿಸಿದ್ದ ನೃತ್ಯಗಾರರು ಅತ್ಯುತ್ಸಾಹದಿಂದ ಮೋದಿಯವರನ್ನು ಬರಮಾಡಿಕೊಮಡರು. ಈ ಸಂದರ್ಭಕ್ಕೆ ಆಧ್ಯಾತ್ಮದ ಸ್ಪರ್ಶ ನೀಡಿ ವೇದ ಮಂತ್ರಗಳನ್ನು ಪಠಿಸಿದರು, ಡಯಾಸ್ಪೊರಾ ಸದಸ್ಯರು ಗೌರವ ಮತ್ತು ಮೆಚ್ಚುಗೆಯ ಸೂಚಕವಾಗಿ ಅವರಿಗೆ ಉಡುಗೊರೆಗಳನ್ನು ನೀಡಿದರು.
ರಿಯೊ ಡಿ ಜನೈರೊದಲ್ಲಿ ಅವರನ್ನು ಬ್ರೆಜಿಲ್‌ನಲ್ಲಿರುವ ಭಾರತೀಯ ರಾಯಭಾರಿ ಸುರೇಶ್ ರೆಡ್ಡಿ ಸೇರಿದಂತೆ ಭಾರತೀಯ ಅಧಿಕಾರಿಗಳು ಬರಮಾಡಿಕೊಂಡರು.

ಈ ಕ್ಷಣಕ್ಕಾಗಿ ನಾವು ಉತ್ಸುಕರಾಗಿದ್ದೇವೆ. ನಾವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳ ನಾಯಕನನ್ನು ಭೇಟಿಯಾಗಲು ಬಯಸಿದ್ದೇವೆ. ಅವರನ್ನು ಖುದ್ದು ನೋಡುವುದೇ ಒಂದು ಗೌರವ, ಇದು ನಮಗೆ ಹೆಮ್ಮೆಯ ಕ್ಷಣ ಎಂದು ಡಯಾಸ್ಪೋರದ ಸದಸ್ಯರೊಬ್ಬರು ಹೇಳಿದ್ದಾರೆ.

ಪ್ರಧಾನಿ ಮೋದಿ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದು, ಬ್ರೆಜಿಲ್​ಗೆ ಬಂದಿಳಿಯುತ್ತಿದ್ದಂತೆ ಅಲ್ಲಿನ ಭಾರತೀಯರು ಮಂತ್ರಘೋಷಗಳೊಂದಿಗೆ ನನ್ನನ್ನು ಸ್ವಾಗತಿಸಿದರು, ನನ್ನ ಮೇಲೆ ಅವರಿಟ್ಟಿರುವ ಪ್ರೀತಿಯನ್ನು ಇದು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.

ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಬ್ರೆಜಿಲ್‌ನ ರಿಯೊ ಡಿ ಜನೈರೊಗೆ ಬಂದಿಳಿದಿದ್ದಾರೆ. ಶೃಂಗಸಭೆಯಲ್ಲಿನ ಚರ್ಚೆಗಳು ಮತ್ತು ವಿವಿಧ ವಿಶ್ವ ನಾಯಕರೊಂದಿಗೆ ಉತ್ಪಾದಕ ಸಂವಾದಗಳನ್ನು ನಾನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.

ತಮ್ಮ ಪ್ರವಾಸದ ಮೂರನೇ ಮತ್ತು ಅಂತಿಮ ಹಂತದಲ್ಲಿ, ಮೋದಿ ನವೆಂಬರ್ 19 ರಿಂದ 21 ರವರೆಗೆ ಅಧ್ಯಕ್ಷ ಮೊಹಮ್ಮದ್ ಇರ್ಫಾನ್ ಅಲಿ ಅವರ ಆಹ್ವಾನದ ಮೇರೆಗೆ ಗಯಾನಾಗೆ ಭೇಟಿ ನೀಡಲಿದ್ದಾರೆ. ಇದು 50 ವರ್ಷಗಳ ನಂತರ ಗಯಾನಾಕ್ಕೆ ಭಾರತೀಯ ಪ್ರಧಾನಿಯ ಮೊದಲ ಭೇಟಿಯಾಗಿದೆ.

ಮೋದಿಯವರ ನೈಜೀರಿಯಾ ಭೇಟಿಯು 17 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಪಶ್ಚಿಮ ಆಫ್ರಿಕಾದ ದೇಶಕ್ಕೆ ಮಾಡಿದ ಮೊದಲ ಪ್ರವಾಸವಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Nov 18, 2024 09:26 AM