Video: ಒನ್ ವೇಯಲ್ಲಿ ನುಗ್ಗಿದ ಶಾಲಾವಾಹನ: 12 ಮಕ್ಕಳ ಪ್ರಾಣದ ಜತೆ ಚಾಲಕ ಚೆಲ್ಲಾಟ
Ramanagara News: ಒನ್ ವೇಯಲ್ಲಿ ಶಾಲಾವಾಹನ ನುಗ್ಗಿಸುವ ಮೂಲಕ ಚಾಲಕ ಮಕ್ಕಳ ಪ್ರಾಣದ ಜತೆ ಚೆಲ್ಲಾಟವಾಡಿರುವಂತಹ ಘಟನೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಡೆದಿದೆ. ಕಾರಿನ ಮುಂಭಾಗದ ಕ್ಯಾಮೆರಾದಲ್ಲಿ ಚಾಲಕನ ದುಸ್ಸಾಹಸ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಡೇಂಜರ್ ಡ್ರೈವ್ ವಿಡಿಯೋ ವೈರಲ್ ಆಗಿದೆ.
ರಾಮನಗರ, ಸೆಪ್ಟೆಂಬರ್ 13: ಒನ್ ವೇಯಲ್ಲಿ ಶಾಲಾವಾಹನ ನುಗ್ಗಿಸುವ ಮೂಲಕ ಚಾಲಕ (driver) ಮಕ್ಕಳ ಪ್ರಾಣದ ಜತೆ ಚೆಲ್ಲಾಟವಾಡಿರುವಂತಹ ಘಟನೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಡೆದಿದೆ. ಕಾರಿನ ಮುಂಭಾಗದ ಕ್ಯಾಮೆರಾದಲ್ಲಿ ಚಾಲಕನ ದುಸ್ಸಾಹಸ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಡೇಂಜರ್ ಡ್ರೈವ್ ವಿಡಿಯೋ ವೈರಲ್ ಆಗಿದೆ. ಸ್ವಲ್ಪದರಲ್ಲಿ ಕಾರು ಚಾಲಕರು ಬಚಾವಾಗಿದ್ದಾರೆ. ಕ್ರೈಸ್ಟ್ ಶಾಲೆಯ ವಾಹನ ಎಂದು ಹೇಳಲಾಗಿತ್ತಿದೆ. ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಎಡಿಜಿಪಿ ಅಲೋಕ್ ಕುಮಾರ್ ಆದೇಶಿಸಿದ್ದು, 12ಕ್ಕೂ ಹೆಚ್ವು ಮಕ್ಕಳ ಪ್ರಾಣದ ಜತೆ ಚೆಲ್ಲಾಟವಾಡಿದ ಚಾಲಕನಿಗಾಗಿ ಕುಂಬಳಗೋಡು ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Sep 13, 2023 08:32 PM