ಯಾವ ಟೈಟಲ್ ಕೂಡ ನನಗೆ ಬೇಡ, ಹಾಗೆ ಕರೆಯಬೇಡಿ: ವಿನೋದ್ ಪ್ರಭಾಕರ್
Vinod Prabhakar: ವಿನೋದ್ ಪ್ರಭಾಕರ್ ನಟನೆಯ 'ಫೈಟರ್' ಸಿನಿಮಾದ ಹಾಡೊಂದು ಇಂದು (ಸೆಪ್ಟೆಂಬರ್ 13) ಬಿಡುಗಡೆ ಆಗಿದೆ. ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ವಿನೋದ್ ಪ್ರಭಾಕರ್, ನನಗೆ ಯಾವುದೇ ಸ್ಟಾರ್ ಗಿರಿಯ ವಿಶೇಷಣ ಇಟ್ಟು ಕರೆಯಬೇಡಿ ಎಂದು ಮನವಿ ಮಾಡಿದರು.
ವಿನೋದ್ ಪ್ರಭಾಕರ್ (Vinod Prabhakar) ನಟನೆಯ ‘ಫೈಟರ್’ ಸಿನಿಮಾದ ಹಾಡೊಂದು ಇಂದು (ಸೆಪ್ಟೆಂಬರ್ 13) ಬಿಡುಗಡೆ ಆಗಿದೆ. ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ವಿನೋದ್ ಪ್ರಭಾಕರ್, ನನಗೆ ಯಾವುದೇ ವಿಶೇಷಣ ಇಟ್ಟು ಕರೆಯಬೇಡಿ ಎಂದು ಮನವಿ ಮಾಡಿದರು. ನನಗೆ ಸ್ಟಾರ್ ಗಿರಿ ಇಷ್ಟವಾಗಲ್ಲ, ಸಿನಿಮಾಗಳಲ್ಲಿಯೂ ನನ್ನ ಹೆಸರಿನ ಮುಂದೆ ಹಿಂದೆ ಏನು ಸೇರಿಸುವುದಿಲ್ಲ. ಟೈಗರ್ ಎನ್ನುವುದು ನನ್ನ ತಂದೆ ಸಂಪಾದಿಸಿದ ಹೆಸರು. ನನ್ನನ್ನು ಪ್ರೀತಿಯಿಂದ ಮರಿ ಟೈಗರ್ ಎನ್ನುತ್ತೀರಿ. ಅದಕ್ಕೆ ಧನ್ಯವಾದ ಆದರೆ ನನಗೆ ಯಾವುದೇ ಸ್ಟಾರ್ ಟೈಟಲ್ಗಳು ಬೇಡ ಎಂದು ವಿನಯದಿಂದ ಹೇಳಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos