Video: ವಡೋದರಾದಲ್ಲಿ ಪ್ರಧಾನಿ ಮೋದಿ ರೋಡ್​ ಶೋ, ಕರ್ನಲ್ ಸೋಫಿಯಾ ಖುರೇಷಿ ಕುಟುಂಬ ಭಾಗಿ

Updated on: May 26, 2025 | 11:45 AM

ಪ್ರಧಾನಿ ನರೇಂದ್ರ ಮೋದಿ(Narendra Modi) ಇಂದು ಗುಜರಾತ್​ನ ವಡೋದರಾದಲ್ಲಿ ರೋಡ್​ ಶೋ ನಡೆಸಿದ್ದು, ಕರ್ನಲ್ ಖುರೇಷಿ ಕುಟುಂಬವೂ ಕೂಡ ಭಾಗಿಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಮೇಲೆ ಹೂವಿನ ಸುರಿಮಳೆಗೈದಿರುವ ವಿಡಿಯೋ ಇಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕಾಲ ಗುಜರಾತ್ ಪ್ರವಾಸದಲ್ಲಿರಲಿದ್ದಾರೆ.

ವಡೋದರಾ, ಮೇ 26: ಪ್ರಧಾನಿ ನರೇಂದ್ರ ಮೋದಿ(Narendra Modi) ಇಂದು ಗುಜರಾತ್​ನ ವಡೋದರಾದಲ್ಲಿ ರೋಡ್​ ಶೋ ನಡೆಸಿದ್ದು, ಕರ್ನಲ್ ಖುರೇಷಿ ಕುಟುಂಬವೂ ಕೂಡ ಭಾಗಿಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಮೇಲೆ ಹೂವಿನ ಸುರಿಮಳೆಗೈದಿರುವ ವಿಡಿಯೋ ಇಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕಾಲ ಗುಜರಾತ್ ಪ್ರವಾಸದಲ್ಲಿರಲಿದ್ದಾರೆ.

ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಕರ್ನಲ್ ಸೋಫಿಯಾ ಖುರೇಷಿ ಅವರ ಸಹೋದರ ಮೊಹಮ್ಮದ್ ಸಂಜಯ್ ಖುರೇಷಿ ಮಾತನಾಡಿ, ಪ್ರಧಾನಿಯವರನ್ನು ಹತ್ತಿರದಿಂದ ನೋಡುವುದು ತುಂಬಾ ಹೆಮ್ಮೆಯ ಕ್ಷಣವಾಗಿತ್ತು ಎಂದು ಹೇಳಿದರು. ಸೋಫಿಯಾಗೆ ಈ ಅವಕಾಶ ನೀಡಿದ್ದಕ್ಕಾಗಿ ನಮ್ಮ ರಕ್ಷಣಾ ಪಡೆಗೆ ನಾನು ಧನ್ಯವಾದ ಹೇಳುತ್ತೇನೆ. ಮಹಿಳೆ ಮಾಡದ ತಪ್ಪಿಗೆ  ಅನುಭವಿಸಿದ ಶಿಕ್ಷೆಗೆ ಸೇಡು ತೀರಿಸಿಕೊಳ್ಳುವುದಕ್ಕಿಂತ ಉತ್ತಮ ಕ್ಷಣ ಇನ್ನೊಂದಿಲ್ಲ. ನಮ್ಮ ಮಹಿಳೆಯರು  ಪುರುಷರಿಗಿಂತ ಯಾವ ರೀತಿಯಲ್ಲೂ ಕಡಿಮೆಯಿಲ್ಲ ಎಂಬುದನ್ನು ಶತ್ರುಗಳಿಗೂ ತೋರಿಸಿದ್ದಾರೆ ಎಂದರು.

ಸೋಫಿಯಾ ಖುರೇಷಿ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿದ್ದಾರೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದಲ್ಲಿರುವ 9 ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ಸೇನೆ ಜಂಟಿ ದಾಳಿ ಮಾಡಿ ಉಗ್ರರ ನೆಲೆಗಳನ್ನು ನಾಶಪಡಿಸಿರುವ ಕುರಿತು ಸುದ್ದಿಗೋಷ್ಠಿಯಲ್ಲಿ ಇವರೇ ಮಾಹಿತಿ ನೀಡಿದ್ದರು. ಸೋಫಿಯಾ ಖುರೇಷಿ ಮೂಲತಃ ಗುಜರಾತ್‌ನವರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: May 26, 2025 11:39 AM