ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಜಾರಿ ಬಿದ್ದು ರೋಗಿಯ ನರಳಾಟ; ಶೌಚಾಲಯ ಅವ್ಯವಸ್ಥೆ ಬಗ್ಗೆ ಪ್ರಶ್ನಿಸಿದರೆ ಸಿಬ್ಬಂದಿಯ ಅವಾಜ್
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಜಾರಿ ಬಿದ್ದ ರೋಗಿಯೊಬ್ಬರು ನರಳಾಡುತ್ತಿದ್ದರೂ ಸಿಬ್ಬಂದಿ ಅತ್ತ ಸುಳಿಯಲೇ ಇಲ್ಲ, ಶೌಚಾಲಯದ ಸಮಸ್ಯೆ ಬಗ್ಗೆ ಕೇಳಿದರೆ ಸಿಬ್ಬಂದಿ ಅವಾಜ್ ಹಾಕುತ್ತಿದ್ದಾರೆ.
ತುಮಕೂರು: ಜಿಲ್ಲಾಸ್ಪತ್ರೆಯಲ್ಲಿ ಸಮಸ್ಯೆಗಳ ಆಗರವೇ ಇದ್ದು, ಚಿಕಿತ್ಸೆಗಾಗಿ ರೋಗಿಗಳ ಪರದಾಡುವ ಸ್ಥಿತಿ ಎದುರಾಗಿದೆ. ಆಸ್ಪತ್ರೆಯ ಮಹಿಳಾ ವಾರ್ಡ್ನಲ್ಲಿ ಶೌಚಾಲಯ ಎಷ್ಟು ಕೆಟ್ಟದಾಗಿದೆ ಎಂದರೆ ಒಳಗಡೆ ಧೂಳಿನಿಂದ ಕೂಡಿದ ನೀರು ತುಂಬಿ ಕಾಲಿಡಲು ಅಸಹ್ಯವಾಗುವಂತಿದೆ. ಕೆಲವೊಂದು ಶೌಚಾಲಯ ಬ್ಲಾಕ್ ಆಗಿ ನೀರು ಹೊರಬರುತ್ತಿದೆ. ನೆಲದಲ್ಲಿ ತೇವ ಇದ್ದ ಕಾರಣ ಮಹಿಳಾ ರೋಗಿಯೊಬ್ಬರು ಜಾರಿಬಿದ್ದು ನರಳಾಡುತ್ತಿದ್ದರೂ ಇತ್ತ ಆಸ್ಪತ್ರೆ ಸಿಬ್ಬಂದಿ ನೋಡಿಯೂ ಸಹಾಯಕ್ಕೆ ಧಾವಿಸಿಲ್ಲ. ಶೌಚಾಲಯ ಅವ್ಯವಸ್ಥೆ ಬಗ್ಗೆ ಪ್ರಶ್ನಿಸಿದರೆ ಸಿಬ್ಬಂದಿ ಆವಾಜ್ ಹಾಕಿದ್ದಾರೆ.
ಮತ್ತಷ್ಟು ವಿಡಿಯೋಗಳನ್ನು ವೀಕ್ಷಣೆ ಮಾಡಲು ಇಲ್ಲಿ ಕ್ಲಿಕ್ ಮಾಡಿ
Published on: Sep 25, 2022 04:37 PM
Latest Videos