Mysuru Dasara-2022: ನವರಾತ್ರಿಗೆ 9 ದಿನ 9 ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾಳೆ ಚಾಮುಂಡೇಶ್ವರಿ
9 ದಿನಗಳ ಕಾಲ ನವರಾತ್ರಿ ಉತ್ಸವ ನಡೆಯಲಿದ್ದು ಮೈಸೂರಿನ ಚಾಮುಂಡಿಬೆಟ್ಟದಲ್ಲಿ ವಿಶೇಷ ಪೂಜೆ ಇರಲಿದೆ. 9 ದಿನ 9 ರೂಪದಲ್ಲಿ ತಾಯಿ ಚಾಮುಂಡೇಶ್ವರಿಗೆ ಅಲಂಕಾರ ಮಾಡಲಾಗುತ್ತೆ.
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2022ಕ್ಕೆ ಕ್ಷಣಗಣನೆ ಶುರುವಾಗಿದೆ. ನಾಳೆ ಚಾಮುಂಡಿ ಬೆಟ್ಟದಲ್ಲಿ ನಾಡಹಬ್ಬಕ್ಕೆ ಚಾಲನೆ ಸಿಗಲಿದೆ. ಇನ್ನು ವಿಶೇಷವೆಂದರೆ 9 ದಿನಗಳ ಕಾಲ ನವರಾತ್ರಿ ಉತ್ಸವ ನಡೆಯಲಿದ್ದು ಮೈಸೂರಿನ ಚಾಮುಂಡಿಬೆಟ್ಟದಲ್ಲಿ ವಿಶೇಷ ಪೂಜೆ ಇರಲಿದೆ. 9 ದಿನ 9 ರೂಪದಲ್ಲಿ ತಾಯಿ ಚಾಮುಂಡೇಶ್ವರಿಗೆ ಅಲಂಕಾರ ಮಾಡಲಾಗುತ್ತೆ.
- ಮೊದಲ ದಿನ ಬ್ರಾಹ್ಮಿ ಅಲಂಕಾರ
- ಎರಡನೇ ದಿನ ಮಹೇಶ್ವರಿ ಅಲಂಕಾರ
- ಮೂರನೇ ದಿನ ಕೌಮಾರಿ ಅಲಂಕಾರ
- ನಾಲ್ಕನೇ ದಿನ ವೈಷ್ಣವಿ ಅಲಂಕಾರ
- ಐದನೇ ದಿನ ವಾರಾಹಿ ಅಲಂಕಾರ
- ಆರನೇ ದಿನ ಇಂದ್ರಾಣಿ ಅಲಂಕಾರ
- ಏಳನೇ ದಿನ ಸರಸ್ವತಿ ಅಲಂಕಾರ ಅಂದು ರಾತ್ರಿ ಕಾಳರಾತ್ರಿ ಆಚರಣೆ
- ಎಂಟನೇ ದಿನ ದುರ್ಗಾಲಂಕಾರ
- 9ನೇ ದಿನ ಮಹಾಲಕ್ಷ್ಮಿ ಅಲಂಕಾರ ಇರಲಿದೆ
ಕೊನೆಯ ದಿನ ದಶಮಿಯಂದು ಅಶ್ವಾರೋಹಣ ಅಲಂಕಾರ. ಈ ರೀತಿ ಪ್ರತಿದಿನ ಒಂದೊಂದು ಅಲಂಕಾರದಲ್ಲಿ ತಾಯಿ ಚಾಮುಂಡೇಶ್ವರಿ ಮಿಂಚಲಿದ್ದಾರೆ.
Latest Videos