ತೆಲಂಗಾಣ: ಸಾಮಾನ್ಯವಾಗಿ ಮನೆಯಲ್ಲಿ ಸಾಕುವ ಬೆಕ್ಕು ,ನಾಯಿ ಮುಂತಾದ ಸಾಕು ಪ್ರಾಣಿಗಳು ತಮ್ಮ ಮಾತನ್ನು ಕೇಳಲು ಅವುಗಳನ್ನು ಪಳಗಿಸಿ ಅವುಗಳು ಅದ್ಭುತ ಕೌಶಲ್ಯ ಪ್ರದರ್ಶಿಸುವಂತೆ ಮಾಡುತ್ತಾರೆ. ಆದರೆ ಬೆಕ್ಕು ನಾಯಿಯಂತೆ ಮಾಲೀಕನ ಮಾತನ್ನು ಅನುಕರಿಸುವ, ಕೋಳಿಯನ್ನು ನೀವು ಎಲ್ಲಿಯಾದರೂ ನೋಡಿದ್ದೀರಾ? ಸಹಜವಾಗಿಯೇ ಇಂತಹ ದೃಶ್ಯಗಳು ನಿಮ್ಮನ್ನು ಹುಬ್ಬೇರಿಸುವಂತೆ ಮಾಡುತ್ತವೆ. ಇಲ್ಲೊಬ್ಬ ಕೃಷಿಕ ಸಾಕಷ್ಟು ಕಡಕ್ ನಾಥ್ ಕೋಳಿ( ಕಪ್ಪು ಬಣ್ಣದ ಕೋಳಿ)ಯನ್ನು ಸಾಕುತ್ತಿದ್ದಾರೆ. ಅದರಲ್ಲಿ ಒಂದು ಕೋಳಿ ಮಾತ್ರ ಡಿಫರೆಂಟ್ ಆಗಿದ್ದು, ತನ್ನ ವಿಭಿನ್ನತೆಯಿಂದಲೇ ನೆಟ್ಟಿಗರ ಮನ ಗೆದ್ದಿದೆ.
ಈ ಕಡಕ್ ನಾಥ್ ಕೋಳಿ ಬಗ್ಗೆ ಅದರ ಮಾಲೀಕ ತೆಲಂಗಾಣದ ಲಕ್ಷ್ಮೀಪುರದ ಮಲ್ಲಾರೆಡ್ಡಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಈಗ ಎಲ್ಲರನ್ನು ನಿಬ್ಬೆರಗಾಗಿಸಿದೆ. ಮಲ್ಲಾರೆಡ್ಡಿ ಹೇಳಿದಂತೆ ಈ ಕೋಳಿ ಕೇಳುತ್ತದೆ ಮತ್ತು ಹಿಂದೆ-ಮುಂದೆ ಹೇಳಿದಂತೆ ಹೋಗುತ್ತದೆ. ಮಾಲಿಕನ ಮಾತು ಕೇಳುವ ಕೋಳಿಯನ್ನು ನೋಡಲು ಸುತ್ತಮುತ್ತಲ ಗ್ರಾಮಗಳ ಅನೇಕರ ಜನರು ಆಸಕ್ತಿ ತೋರುತ್ತಿದ್ದಾರೆ. ಅದೇನೇ ಇರಲಿ, ಒಂದು ಕಾಲದಲ್ಲಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಮಲ್ಲಾರೆಡ್ಡಿ ಈಗ ಕೋಳಿಗಳಿಗೂ ಶಿಸ್ತಿನ ಪಾಠ ಹೇಳಿಕೊಡುವುದು ಭಾರೀ ಮೆಚ್ಚುಗೆಗೆ ಕಾರಣವಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: