Video: ಬಿಜೆಪಿ-ಪಿಎಂಕೆ ಅಭ್ಯರ್ಥಿಗೆ ಜಯ ಖಂಡಿತ ಎಂದ ಗಿಳಿ ಜ್ಯೋತಿಷಿ ಜೈಲಿಗೆ, ಪೊಲೀಸರು ಹೇಳಿದ್ದೇನು?

|

Updated on: Apr 13, 2024 | 12:21 PM

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಪಟ್ಟಾಲಿ ಮಕ್ಕಳ್ ಕಚ್ಚಿ ಪಕ್ಷದ (ಪಿಎಂಕೆ) ಕಡಲೂರು ಕ್ಷೇತ್ರದ ಅಭ್ಯರ್ಥಿ ಥಂಗರ್ ಬಾಚನ್ ಅವರು ಈ ಬಾರಿ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದು ಗಿಳಿಶಾಸ್ತ್ರ ನುಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಈ ವಿಡಿಯೋ ಎಲ್ಲ ಕಡೆ ವೈರಲ್​​ ಆಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ. ಈ ವಿಡಿಯೋದಲ್ಲಿ ಜ್ಯೋತಿಷಿಯನ್ನು ಪೊಲೀಸರು ಎಳೆದುಕೊಂಡು ಹೋಗಿ ಬಲವಂತವಾಗಿ ತಮ್ಮ ವಾಹನದಲ್ಲಿ ಕೂರಿಸುವುದನ್ನು ನೋಡಬಹುದು. ಇದನ್ನು ನೋಡಿ ಜನರು ಪೊಲೀಸರ ಈ ಕ್ರಮವನ್ನು ಖಂಡಿಸಿದ್ದಾರೆ.

ತಮಿಳುನಾಡಿನಲ್ಲಿ (Tamil Nadu) ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಪಟ್ಟಾಲಿ ಮಕ್ಕಳ್ ಕಚ್ಚಿ ಪಕ್ಷದ (ಪಿಎಂಕೆ) ಕಡಲೂರು ಕ್ಷೇತ್ರದ ಅಭ್ಯರ್ಥಿ ಥಂಗರ್ ಬಾಚನ್ (Thangar Bachan) ಅವರು ಈ ಬಾರಿ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದು ಗಿಳಿಶಾಸ್ತ್ರ ನುಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಈ ವಿಡಿಯೋ ಎಲ್ಲ ಕಡೆ ವೈರಲ್​​ ಆಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ. ಈ ವಿಡಿಯೋದಲ್ಲಿ ಜ್ಯೋತಿಷಿಯನ್ನು ಪೊಲೀಸರು ಎಳೆದುಕೊಂಡು ಹೋಗಿ ಬಲವಂತವಾಗಿ ತಮ್ಮ ವಾಹನದಲ್ಲಿ ಕೂರಿಸುವುದನ್ನು ನೋಡಬಹುದು. ಇದನ್ನು ನೋಡಿ ಜನರು ಪೊಲೀಸರ ಈ ಕ್ರಮವನ್ನು ಖಂಡಿಸಿದ್ದಾರೆ. ಇನ್ನು ಇದು DMK ನೇತೃತ್ವದ ಸರ್ಕಾರದ ಸರ್ವಾಧಿಕಾರ ನೀತಿ ಎಂದು ಹೇಳಿದ್ದಾರೆ. ಈ ವಿಡಿಯೋಗೆ ಸ್ಪಷ್ಟನೆ ನೀಡಿದ ಪೊಲೀಸರು. ಗಿಳಿಗಳನ್ನು ಪಂಜರದಲ್ಲಿ ಇಡುವುದು ಹಾಗೂ ಅದನ್ನು ಇಂತಹ ವಿಚಾರಗಳಿಗೆ ಬಳಸುವುದು ವನ್ಯಜೀವಿ ಸಂರಕ್ಷಣಾ ಕಾಯಿದೆಯ (1972) ಶೆಡ್ಯೂಲ್ 4ರ ಪ್ರಕಾರ ಕಾನೂನುಬಾಹಿರವಾಗಿದೆ ಎಂದು ಅರಣ್ಯ ಇಲಾಖೆ ಪೊಲೀಸರು ಹೇಳಿದ್ದಾರೆ. ಇದೀಗ ಗಿಳಿಯನ್ನು ಅರಣ್ಯಕ್ಕೆ ಬಿಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಅಭ್ಯರ್ಥಿ ಥಂಗರ್ ಬಾಚನ್ ಅವರ ಬಗ್ಗೆ ಭವಿಷ್ಯ ಹೇಳುವ ವಿಡಿಯೋ ಕೂಡ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಗಿಳಿಯು ಪಂಜರದಿಂದ ಹೊರಗೆ ಬಂದು, ಬಾಚನ್ ಪೂಜಿಸಿದ ದೇವತೆಯ ಚಿತ್ರವನ್ನು ಹೊಂದಿರುವ ಕಾರ್ಡ್‌ಗಳನ್ನು ಆರಿಸು ಜ್ಯೋತಿಷಿಯ ಕೈಗೆ ನೀಡುತ್ತದೆ. ಆ ಕಾರ್ಡ್​​ನ್ನು ನೋಡಿ ಜ್ಯೋತಿಷಿ ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೀರಾ ಎಂದು ಹೇಳಿದ್ದಾರೆ. ಭವಿಷ್ಯವಾಣಿಯನ್ನು ಕೇಳಿ ಸಂತೋಷಗೊಂಡ ಪಿಎಂಕೆ ಅಭ್ಯರ್ಥಿ ಬಾಚನ್ ಗಿಳಿಗೆ ಬಾಳೆಹಣ್ಣು ತಿನ್ನಿಸಿದ್ದಾರೆ. ಈ ವಿಡಿಯೋ ವೈರಲ್​​ ಆಗುತ್ತಿದ್ದಂತೆ ಜ್ಯೋತಿಷಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:18 pm, Sat, 13 April 24