ಗೇಮಿಂಗ್ ಕ್ಷೇತ್ರಕ್ಕೆ ಹೊಸಬ ಅನ್ನುತ್ತಾ ಗೇಮರ್ಗಳೊಂದಿಗೆ ಗೇಮ್ಗಳನ್ನಾಡಿದ ಪ್ರಧಾನಿ ಮೋದಿ
ಗೇಮರ್ ಗಳು ಪ್ರಧಾನಿಯವರ ಕ್ಯಾರೆಕ್ಟರ್ ಗೆ ‘ನಮೋ’ ಅಂತಲೇ ಹೆಸರು ನೀಡಿದ್ದಾರೆ. ಮೋದಿಯವರು ಆಡುವಾಗ ಅವರಲ್ಲಿರುವ ತನ್ಮಯತೆಯನ್ನು ಗಮನಿಸಿ. ಒಂದು ಚಿಕ್ಕಮಗುವಿನ ಉತ್ಸಾಹ ಅವರಲ್ಲಿ ಕಾಣುತ್ತದೆ. ‘ನಿಮ್ಮ ಪ್ರಪಂಚಕ್ಕೆ ನಾನು ತೀರ ಹೊಸಬ’ ಅನ್ನುತ್ತಲೇ ಅವರು ಗೇಮ್ ಆಡುತ್ತಾರೆ!
ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi ) ದೇಶದ ಖ್ಯಾತ ಗೇಮರ್ ಗಳ ಜೊತೆ ಈ-ಸ್ಪೋರ್ಟ್ಸ್ (E-sports) ಬಗ್ಗೆ ವಿಶದವಾಗಿ ಚರ್ಚೆ ನಡೆಸಿದ ಬಳಿಕ ಅವರೊಂದಿಗೆ ಗೇಮ್ ಗಳನ್ನೂ ಆಡಿದರು. ವಿಡೀಯೋದಲ್ಲಿ ಅವರು ಕಣ್ಣಿಗೆ ಹೊಲೊಡೆಕ್ (holodeck) ಧರಿಸಿ ಸ್ಕ್ರೀನ್ ಮುಂದೆ ಜಾಯ್ ಸ್ಟಿಕ್ ಹಿಡಿದು ನಿಲ್ಲುವುದನ್ನು ವಿಡಿಯೋದಲ್ಲಿ ನೋಡಬಹುದು. ಗೇಮರ್ ಗಳು ಪ್ರಧಾನಿಯವರ ಕ್ಯಾರೆಕ್ಟರ್ ಗೆ ‘ನಮೋ’ ಅಂತಲೇ ಹೆಸರು ನೀಡಿದ್ದಾರೆ. ಮೋದಿಯವರು ಆಡುವಾಗ ಅವರಲ್ಲಿರುವ ತನ್ಮಯತೆಯನ್ನು ಗಮನಿಸಿ. ಒಂದು ಚಿಕ್ಕಮಗುವಿನ ಉತ್ಸಾಹ ಅವರಲ್ಲಿ ಕಾಣುತ್ತದೆ. ‘ನಿಮ್ಮ ಪ್ರಪಂಚಕ್ಕೆ ನಾನು ತೀರ ಹೊಸಬ’ ಅನ್ನುತ್ತಲೇ ಅವರು ಗೇಮ್ ಆಡುತ್ತಾರೆ! ಯುವಕರು ಅವರಿಗೆ ಗೇಮ್ ವಿಧಾನ, ಆಯಾಮ, ನಡೆ ಮೊದಲಾದ ಸಂಗತಿಗಳನ್ನು ವಿವರಿಸುತ್ತಾರೆ. ಈ ಕ್ಷೇತ್ರದಲ್ಲಿ ನೀವೆಲ್ಲ ಪ್ರಾವೀಣ್ಯತೆ ಸಾಧಿಸಿ ವಿಶ್ವದಲ್ಲಿ ಹೆಸರುವಾಸಿಯಾಗಬೇಕು ಮತ್ತು ಗೇಮಿಂಗ್ ನಲ್ಲೂ ದೇಶದ ಹೆಸರು ಉಜ್ವಲಗೊಳಿಸಬೇಕೆನ್ನುವುದು ತಮ್ಮ ಮಹದಾಸೆಯಾಗಿದೆ ಎಂದು ಪ್ರಧಾನಿ ಮೋದಿ ಗೇಮರ್ ಗಳಿಗೆ ಹೇಳುತ್ತಾರೆ.
ನಂತರ ಅವರು ಕ್ಯಾಪ್, ಟೀ ಶರ್ಟ್, ಮೌಸ್ ಗಳ ಮೇಲೆ ಗಳಿಗೆ ಹಸ್ತಾಕ್ಷರ ಹಾಕಿ ಅವರಿಗೆ ನೀಡುತ್ತಾರೆ. ಯವಕರು ಪಾದಮುಟ್ಟಿ ನಮಸ್ಕರಿಸುವಾಗ ಬೆನ್ನುತಟ್ಟಿ ಅಭಿನಂದಿಸುತ್ತಾರೆ. ಎಲ್ಲರೂ ಪ್ರಧಾನಿಯವರೊಂದಿಗೆ ಪ್ರತ್ಯೇಕವಾಗಿ ಮತ್ತು ಗುಂಪಾಗಿ ಫೋಟೋಗಳನ್ನು ತೆಗೆಸಿಕೊಳ್ಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಗೇಮರ್ ಗಳ ಸಂವಾದ ನಡೆಸಿ ಭಾರತದಲ್ಲಿ ಗೇಮಿಂಗ್ ಭವಿಷ್ಯ ಮತ್ತು ಇತರ ಆಯಾಮಗಳನ್ನು ಚರ್ಚಿಸಿದ ಪ್ರಧಾನಿ ನರೇಂದ್ರ ಮೋದಿ