AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಕೀಯದಿಂದ ನಾನೀಗ ನಿವೃತ್ತನಾಗಿರುವುದರಿಂದ ಚುನಾವಣೆಯಲ್ಲಿ ಸಹಕರಿಸುವಂತೆ ಸಿದ್ದರಾಮಯ್ಯ ಕೋರಿದರು: ವಿ ಶ್ರೀನಿವಾಸ್ ಪ್ರಸಾದ್

ರಾಜಕೀಯದಿಂದ ನಾನೀಗ ನಿವೃತ್ತನಾಗಿರುವುದರಿಂದ ಚುನಾವಣೆಯಲ್ಲಿ ಸಹಕರಿಸುವಂತೆ ಸಿದ್ದರಾಮಯ್ಯ ಕೋರಿದರು: ವಿ ಶ್ರೀನಿವಾಸ್ ಪ್ರಸಾದ್

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 13, 2024 | 2:43 PM

ಪ್ರಧಾನಿ ನರೇಂದ್ರ ಮೋದಿಯವರು ನಾಳೆ ರಾಜ್ಯಕ್ಕೆ ಅಗಮಿಸುತ್ತಿದ್ದು ಅವರ ಕಾರ್ಯಕ್ರಮದಲ್ಲಿ ಭಾಗಿಯಾಗ್ತೀರಾ ಅಂತ ಕೇಳಿದ ಪ್ರಶ್ನೆಗೆ ಅವರು, ಅರೋಗ್ಯ ಸರಿಯಿಲ್ಲದ ಕಾರಣ ಯಾವುದೇ ಚುನಾವಣಾ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದೇನೆ ಮತ್ತು ತನಗೆ ಮನೆಯಿಂದ ಹೊರಗೆ ಹೋಗುವುದು ಸಾಧ್ಯವಾಗುತ್ತಿಲ್ಲ ಎಂದು ಪ್ರಸಾದ್ ಹೇಳಿದರು.

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಚಾಮರಾಜನಗರ ಬಿಜೆಪಿ ಸಂಸದ (BJP MP) ವಿ ಶ್ರೀನಿವಾಸ ಪ್ರಸಾದ್ (V Srinivas Prasad) ನಡುವೆ ದಶಕಗಳಿಂದ ಸ್ನೇಹವಿದೆ. ಆದರೆ ಪ್ರಸಾದ್ ಅವರೇ ಇಂದು ಮಾಧ್ಯಮಗಳಿಗೆ ಹೇಳಿದ ಹಾಗೆ ಬೇರೆ ಬೇರೆ ಕಾರಣಗಳಿಗೆ ಅವರಿಬ್ಬರು ದೂರವಾಗಿದ್ದರು. ಅನಾರೋಗ್ಯದಿಂದ ಬಳಲುತ್ತಿರುವ ಸಂಸದರ ಮನೆಗೆ ಇಂದು ಸಿದ್ದರಾಮಯ್ಯ ಭೇಟಿ ನೀಡಿ ಆರೋಗ್ಯದ ಬಗ್ಗೆ ವಿಚಾರಿಸಿದರು. ಅವರು ತೆರಳಿದ ಬಳಿಕ ಪತ್ರಕರ್ತರೊಡನೆ ಮಾತಾಡಿದ ಶ್ರೀನಿವಾಸ್ ಪ್ರಸಾದ್, ಮುಖ್ಯಮಂತ್ರಿಯವರ ಜೊತೆ ಬಹಳ ವರ್ಷಗಳಿಂದ ಮಾತಾಡಿರಲಿಲ್ಲ, ಅವರು ಇಂದು ಮನೆಗೆ ಬಂದಿದ್ದರು ಮತ್ತು ಅರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿದರು. ತಮ್ಮ ನಡುವೆ ರಾಜಕಾರಣದ ಬಗ್ಗೆ ಹೆಚ್ಚಿನ ಚರ್ಚೆಯೇನೂ ನಡೆಯಲಿಲ್ಲ, ಆದರೆ ತಾನೀಗ ರಾಜಕೀಯದಿಂದ ನಿವೃತ್ತನಾಗಿರುವುದರಿಂದ ಚುನಾವಣೆಯಲ್ಲಿ ಸಹಕರಿಸುವಂತೆ ಸಿದ್ದರಾಮಯ್ಯ ಕೋರಿದರು ಎಂದು ಪ್ರಸಾದ್ ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರು ನಾಳೆ ರಾಜ್ಯಕ್ಕೆ ಅಗಮಿಸುತ್ತಿದ್ದು ಅವರ ಕಾರ್ಯಕ್ರಮದಲ್ಲಿ ಭಾಗಿಯಾಗ್ತೀರಾ ಅಂತ ಕೇಳಿದ ಪ್ರಶ್ನೆಗೆ ಅವರು, ಅರೋಗ್ಯ ಸರಿಯಿಲ್ಲದ ಕಾರಣ ಯಾವುದೇ ಚುನಾವಣಾ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದೇನೆ ಮತ್ತು ತನಗೆ ಮನೆಯಿಂದ ಹೊರಗೆ ಹೋಗುವುದು ಸಾಧ್ಯವಾಗುತ್ತಿಲ್ಲ ಎಂದು ಪ್ರಸಾದ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಿಜೆಪಿಗೆ ಮೈಸೂರಿನಲ್ಲಿ ಮೈತ್ರಿ ಲಾಭ, ತವರು ಕ್ಷೇತ್ರದಲ್ಲಿ ‘ಕೈ’ ಬಲಪಡಿಸಲು ಸಿದ್ದರಾಮಯ್ಯಗಿದೆ ಹಲವು ಸವಾಲು