Video: ಜಮ್ಮು-ಕಾಶ್ಮೀರದ ಸೋನಾಮಾರ್ಗ್​ ಮಾರುಕಟ್ಟೆಯಲ್ಲಿ ಭೀಕರ ಅಗ್ನಿ ಅವಘಡ

Updated on: Feb 09, 2025 | 8:25 AM

ಜಮ್ಮು ಮತ್ತು ಕಾಶ್ಮೀರದ ಗಂಡೇರ್ಬಲ್ ಜಿಲ್ಲೆಯ ಪ್ರಸಿದ್ಧ ರೆಸಾರ್ಟ್ ಪಟ್ಟಣವಾದ ಸೋನಾಮಾರ್ಗ್‌ನ ಮಾರುಕಟ್ಟೆಯಲ್ಲಿ ಶನಿವಾರ ಭಾರಿ ಬೆಂಕಿ ಕಾಣಿಸಿಕೊಂಡಿದೆ. ರೆಸ್ಟೋರೆಂಟ್‌ನಿಂದ ಪ್ರಾರಂಭವಾದ ಬೆಂಕಿ ಬೇಗನೆ ಸೋನಾಮಾರ್ಗ್ ಮಾರುಕಟ್ಟೆಯ ಪಕ್ಕದ ಅಂಗಡಿಗಳಿಗೆ ಹರಡಿತು. ಅಗ್ನಿಶಾಮಕ ದಳದವರು ಸ್ಥಳದಲ್ಲಿದ್ದು, ಬೆಂಕಿಯನ್ನು ನಿಯಂತ್ರಣಕ್ಕೆ ತರುವ ಕೆಲಸ ಮಾಡಿದ್ದಾರೆ.

ಬೆಂಕಿ ನಿಯಂತ್ರಣದಲ್ಲಿದೆ… ಅಂಗಡಿಗಳು, ರೆಸ್ಟೋರೆಂಟ್‌ಗಳಲ್ಲಿ ಯಾವುದೇ ಅಗ್ನಿಶಾಮಕ ಸಾಧನಗಳನ್ನು ಅಳವಡಿಸಲಾಗಿಲ್ಲ. ನಾವು ಅವರನ್ನು ಅಗ್ನಿಶಾಮಕ ಸಾಧನಗಳನ್ನು ಅಳವಡಿಸುವಂತೆ ಕೇಳುತ್ತಲೇ ಇದ್ದೆವು, 40-45 ಅಂಗಡಿಗಳು ಸುಟ್ಟು ಭಸ್ಮವಾಗಿವೆ ಎಂದು ಅಗ್ನಿಶಾಮಕ ಅಧಿಕಾರಿ ಗುಲಾಮ್ ಹಸನ್ ಹೇಳಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ