Video: ಇನ್ನುಮುಂದೆ ಭಾರತದ ನೆಲದಲ್ಲಿ ಭಯೋತ್ಪಾದಕರ ಅಂತ್ಯಕ್ರಿಯೆಗೆ ಅವಕಾಶವಿಲ್ಲ: ಇಲ್ಯಾಸಿ

Updated on: May 25, 2025 | 9:37 AM

ಇನ್ನುಮುಂದೆ ಭಯೋತ್ಪಾದಕರ ಶವವನ್ನು ಭಾರತದ ಮಣ್ಣಿನಲ್ಲಿ ಹೂಳಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಆಲ್ ಇಂಡಿಯಾ ಇಮಾಮ್ ಆರ್ಗನೈಸೇಷನ್ ಮುಖ್ಯಸ್ಥ ಉಮರ್ ಅಹ್ಮದ್ ಇಲ್ಯಾಸಿ ಹೇಳಿಕೆ ನೀಡಿದ್ದಾರೆ. ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಅವರ ಮಗಳ ವಿವಾಹ ಸಮಾರಂಭಕ್ಕಾಗಿ ಮುಖ್ಯ ಇಮಾಮ್ ಮಧ್ಯಪ್ರದೇಶದ ಗ್ವಾಲಿಯರ್‌ಗೆ ಆಗಮಿಸಿದ್ದರು.

ಗ್ವಾಲಿಯರ್, ಮೇ 25: ಇನ್ನುಮುಂದೆ ಭಯೋತ್ಪಾದಕರ ಶವವನ್ನು ಭಾರತದ ಮಣ್ಣಿನಲ್ಲಿ ಹೂಳಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಆಲ್ ಇಂಡಿಯಾ ಇಮಾಮ್ ಆರ್ಗನೈಸೇಷನ್ ಮುಖ್ಯಸ್ಥ ಉಮರ್ ಅಹ್ಮದ್ ಇಲ್ಯಾಸಿ ಹೇಳಿಕೆ ನೀಡಿದ್ದಾರೆ. ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಅವರ ಮಗಳ ವಿವಾಹ ಸಮಾರಂಭಕ್ಕಾಗಿ ಮುಖ್ಯ ಇಮಾಮ್ ಮಧ್ಯಪ್ರದೇಶದ ಗ್ವಾಲಿಯರ್‌ಗೆ ಆಗಮಿಸಿದ್ದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಇಲ್ಯಾಸಿ, ಭಯೋತ್ಪಾದಕ ಸಂಘಟನೆಗಳು ‘ಇಸ್ಲಾಂ’ ಮತ್ತು ‘ಮೊಹಮ್ಮದ್’ ನಂತಹ ಪವಿತ್ರ ಪದಗಳನ್ನು ತಮ್ಮ ಹೆಸರುಗಳಿಂದ ತೆಗೆದುಹಾಕಬೇಕು, ಏಕೆಂದರೆ ಅವರ ಕಾರ್ಯಗಳು ಇಸ್ಲಾಂನ ನಿಜವಾದ ಬೋಧನೆಗಳಿಗೆ ವಿರುದ್ಧವಾಗಿವೆ.ಲವ್ ಜಿಹಾದ್ ಬಗ್ಗೆ ಇಲ್ಯಾಸಿ ಮಾತನಾಡಿ,ಮುಕ್ತವಾಗಿ ಒಪ್ಪಿಕೊಂಡು ಮಾಡುವ ವಿವಾಹಗಳು ನಡೆಯಲಿ, ಆದರೆ ಗೊಂದಲ ಸೃಷ್ಟಿಸುವ ವಿವಾಹಗಳನ್ನು ತಪ್ಪಿಸಬೇಕು ಎಂದರು.ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ. ಭಯೋತ್ಪಾದಕನೊಬ್ಬ ಭೂತವಿದ್ದಂತೆ, ಮತ್ತು ಅವನನ್ನು ಅದೇ ರೀತಿ ನಡೆಸಿಕೊಳ್ಳಬೇಕು ಎಂದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More