ಕದ್ದ ಬೈಕ್‌ಗಳನ್ನ ವಿದ್ಯಾರಣ್ಯಪುರ ಕಾನ್ಸ್ಟೇಬಲ್ ಏನ್ ಮಾಡುತ್ತಿದ್ದ ಗೊತ್ತಾ? ವಿಡಿಯೋ ನೋಡಿ
ಕದ್ದ ಬೈಕ್‌ಗಳಿಗೆ ಸ್ವತಃ ಹೊನ್ನಪ್ಪನೇ ನಕಲಿ ದಾಖಾಲಾತಿಗಳನ್ನ ತಯಾರಿಸಿ ಕೊಡುತ್ತಿದ್ದ ಅಂತ ವಿಚಾರಣೆ ಬಳಿಕ ಬಯಲಾಗಿದೆ. ಪೊಲೀಸ್ ಹುದ್ದೆಗೆ ಬಂದು ಇನ್ನೂ ನಾಲ್ಕೈದು ವರ್ಷವಾಗಿಲ್ಲ.
ಸಮಾಜದಲ್ಲಾಗುವ ಅಪರಾಧಗಳನ್ನ ಬಯಲಿಗೆ ಎಳೆದು ತಕ್ಕ ಶಿಕ್ಷೆ ನೀಡುವುದು ಪೊಲೀಸರ ಕಾಯಕ. ಆದರೆ ಪೊಲೀಸ್ ಕಾನ್ಸ್ಟೇಬಲ್ ಒಬ್ಬ ನಾಲ್ಕೈದು ಹುಡುಗರನ್ನ ಇಟ್ಕೊಂಡು ಬೈಕ್ ಕಳ್ಳತನ ಮಾಡಿಸುತ್ತಿದ್ದ. ವಿದ್ಯಾರಣ್ಯಪುರ ಕಾನ್ಸ್ಟೇಬಲ್ ಹೊನ್ನಪ್ಪ ಅಲಿಯಾಸ್ ರವಿ ಎಂಬಾತನನ್ನು ಮಾಗಡಿ ರೋಡ್ ಠಾಣೆ ಪೊಲೀಸರು ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ. ಈತನಿಂದ ಬರೋಬ್ಬರಿ 77 ಲಕ್ಷ ಮೌಲ್ಯದ 53 ಬೈಕ್‌ಗಳನ್ನ ವಶಕ್ಕೆ ಪಡೆದಿದ್ದಾರೆ. ಈತನ ವಿಚಾರಣೆ ಮಾಡುತ್ತಿದ್ದಂತೆ ಮತ್ತಷ್ಟು ಸಂಗತಿಗಳು ಬಯಲಾಗುತ್ತಿವೆ. ಕದ್ದ ಬೈಕ್‌ಗಳಿಗೆ ಸ್ವತಃ ಹೊನ್ನಪ್ಪನೇ ನಕಲಿ ದಾಖಾಲಾತಿಗಳನ್ನ ತಯಾರಿಸಿ ಕೊಡುತ್ತಿದ್ದ ಅಂತ ವಿಚಾರಣೆ ಬಳಿಕ ಬಯಲಾಗಿದೆ. ಪೊಲೀಸ್ ಹುದ್ದೆಗೆ ಬಂದು ಇನ್ನೂ ನಾಲ್ಕೈದು ವರ್ಷವಾಗಿಲ್ಲ. ಅಷ್ಟರಲ್ಲಾಗಲೇ ಹೊನ್ನಪ್ಪ ಲಕ್ಷ ಲಕ್ಷ ಹಣ ಮಾಡಿದ್ದಾನಂತೆ. ಮೊನ್ನೆ ಪೊಲೀಸರು ಅರೆಸ್ಟ್ ಮಾಡಲು ಹೋದಾಗ, 10 ಲಕ್ಷದ ಲಂಚದ ಆಫರ್ ನೀಡಿದ್ದನಂತೆ. ಈ ಬಗ್ಗೆ ಸಂಕ್ಷಿಪ್ತ ವರದಿಗಾಗಿ ವಿಡಿಯೋ ನೋಡಿ.
ಇದನ್ನೂ ಓದಿ
ಸಲ್ಮಾನ್ ಖಾನ್ ಜನ್ಮದಿನ ಸಂಭ್ರಮ; 56ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಸ್ಟಾರ್ ನಟ