Vijay Prakash: ಕೇದಾರನಾಥ ದೇವಾಲಯದಲ್ಲಿ ‘ಓಂ ಶಿವೋಂ..’ ಹಾಡಿಗೆ ಧ್ವನಿಯಾದ ಗಾಯಕ ವಿಜಯ್ ಪ್ರಕಾಶ್
ಕುಟುಂಬ ಸಮೇತರಾಗಿ ವಿಜಯ್ ಪ್ರಕಾಶ್ ಅವರು ಕೇದಾರನಾಥದಲ್ಲಿ ದೇವರ ದರ್ಶನ ಪಡೆದಿದ್ದಾರೆ. ಉತ್ತರಖಂಡದಲ್ಲಿರುವ ಈ ದೇವಾಲಯದಲ್ಲಿ ‘ಓಂ ಶಿವೋಂ..’ ಹಾಡಿನ ಮೂಲಕ ಪ್ರತಿನಿತ್ಯ ಪೂಜೆ ನಡೆಯುತ್ತದೆ.
ಜನಪ್ರಿಯ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್ (Vijay Prakash) ಅವರು ಸಾಕಷ್ಟು ಬ್ಯುಸಿ ಆಗಿದ್ದಾರೆ. ಅವರು ನೀಡಿದ ಸೂಪರ್ ಹಿಟ್ ಹಾಡುಗಳು ಅನೇಕ. ಅವರಿಗೆ ಅಧ್ಯಾತ್ಮದ ಕಡೆಗೂ ಸಖತ್ ಒಲವು ಇದೆ. ಅದಕ್ಕೆ ಸಾಕ್ಷಿ ಎಂಬಂತೆ ಅವರೀಗ ಕೇದಾರನಾಥ ದೇವಾಲಯಕ್ಕೆ (Kedarnath temple) ಭೇಟಿ ನೀಡಿದ್ದಾರೆ. ಅಲ್ಲಿ ದೇವರ ಹಾಡು ಹೇಳುವ ಮೂಲಕ ಭಕ್ತಿ ಮೆರೆದಿದ್ದಾರೆ. ಕುಟುಂಬ ಸಮೇತರಾಗಿ ವಿಜಯ್ ಪ್ರಕಾಶ್ ಅವರು ಕೇದಾರನಾಥದಲ್ಲಿ ದೇವರ ದರ್ಶನ ಪಡೆದಿದ್ದಾರೆ. ಉತ್ತರಖಂಡದಲ್ಲಿರುವ ಈ ದೇವಾಲಯದಲ್ಲಿ ‘ಓಂ ಶಿವೋಂ..’ ಹಾಡಿನ ಮೂಲಕ ಪ್ರತಿನಿತ್ಯ ಪೂಜೆ ನಡೆಯುತ್ತದೆ. ವಿಜಯ್ ಪ್ರಕಾಶ್ ಕೂಡ ದೇವರ ಸನ್ನಿಧಿಯಲ್ಲಿ ‘ಓಂ ಶಿವೋಂ..’ (Om Shivoham) ಗೀತೆ ಹಾಡುವ ಮೂಲಕ ಪೂಜೆ ಸಲ್ಲಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos