ಜೆಕೆ ರಾಜುಗೆ ಎಂದೂ ಮರೆಯಲಾಗದ ಉಡುಗೊರೆ ನೀಡಿದ ವಿಜಯ್ ಪ್ರಕಾಶ್; ಊಹಿಸಲೂ ಸಾಧ್ಯವಿಲ್ಲ

Updated on: Jun 12, 2025 | 10:36 AM

ವಿಜಯ್ ಪ್ರಕಾಶ್ ಅವರು ಎಲ್ಲರಿಗೂ ಇಷ್ಟ ಆಗೋಕೆ ಕಾರಣ ಅವರ ಒಳ್ಳೆಯತನ. ಅವರು ಮಾಡುವ ಒಳ್ಳೆ ಕೆಲಸ ಸಾಕಷ್ಟು ಗಮನ ಸೆಳೆದಿದೆ. ಜೀ ಕನ್ನಡದ ಸರಿಗಮಪ ವೇದಿಕೆ ಮೇಲೆ ಅವರು ನಡೆದುಕೊಂಡ ರೀತಿಗೆ ಎಲ್ಲರೂ ಫಿದಾ ಅಗಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.

ವಿಜಯ್ ಪ್ರಕಾಶ್ (Vijay Prakash) ಅವರು ಮಾಡಿದ ಒಂದು ಒಳ್ಳೆಯ ಕೆಲಸ ಎಲ್ಲರ ಗಮನ ಸೆಳೆದಿದೆ. ‘ಸರಿಗಮಪ’ ವೇದಿಕೆ ಮೇಲೆ ವಿಜಯ್ ಅವರು ಒಂದು ಪ್ರಾಮಿಸ್ ಮಾಡಿದ್ದರು. ಪ್ಲೇ ಬ್ಯಾಕ್ ಸಿಂಗರ್ ಆಗಿ ಹಾಡಲು ಯುವಕರಿಗೆ ಅವಕಾಶ ಸಿಗುತ್ತದೆ. ಆದರೆ, ವಯಸ್ಸಾದವರಿಗೆ ಹಾಡುವ ಅವಕಾಶ ಸಿಗೋದಿಲ್ಲ. ಆದರೆ, ಇಂಥ ಅವಕಾಶವನ್ನು ಜೆಕೆ ರಾಜು ಅವರಿಗೆ ವಿಜಯ್ ಕಲ್ಪಿಸಿದ್ದಾರೆ. ಅವರು ಕಂಪೋಸ್ ಮಾಡಿದ ಹಾಡಿಗೆ ಪ್ರಮೋದ್ ಮರವಂತೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಾಡನ್ನು ರಾಜು ಅವರೇ ಹಾಡಿದ್ದಾರೆ ಅನ್ನೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.