ಸ್ಪಂದನಾ ಸಾವಿನ ಬಳಿಕ ಮೊದಲ ಬಾರಿ ವೇದಿಕೆಗೆ ಬಂದು ಗಳಗಳನೆ ಕಣ್ಣೀರು ಹಾಕಿದ ವಿಜಯ್​ ರಾಘವೇಂದ್ರ

|

Updated on: Aug 27, 2023 | 8:43 AM

‘ಕದ್ದ ಚಿತ್ರ’ ಸಿನಿಮಾದ ಸುದ್ದಿಗೋಷ್ಠಿ ಶನಿವಾರ (ಆಗಸ್ಟ್​ 26) ನಡೆಯಿತು. ಸ್ಪಂದನಾ ನಿಧನದ ಬಳಿಕ ವಿಜಯ್​ ರಾಘವೇಂದ್ರ ಅವರು ವೇದಿಕೆ ಏರಿದ್ದು ಇದೇ ಮೊದಲು. ಇತ್ತೀಚೆಗೆ ತಮ್ಮ ಜೀವನದ ಕಷ್ಟದ ದಿನಗಳಲ್ಲಿ ಬೆಂಬಲವಾಗಿ ನಿಂತಿದ್ದ ಎಲ್ಲರಿಗೂ ಧನ್ಯವಾದ ತಿಳಿಸುತ್ತಾ ಅವರು ಭಾವುಕರಾದರು. ಆ ಸಂದರ್ಭದ ವಿಡಿಯೋ ಇಲ್ಲಿದೆ..

ನಟ ವಿಜಯ್​ ರಾಘವೇಂದ್ರ (Vijay Raghavendra) ಅವರು ಈಗ ನೋವಿನಲ್ಲಿದ್ದಾರೆ. ಅದರ ನಡುವೆಯೂ ಅವರು ನಿರ್ಮಾಪಕರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ‘ಕದ್ದ ಚಿತ್ರ’ (Kadda Chitra) ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಭಾಗಿ ಆಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್​ 25ರಂದು ಈ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಸ್ಪಂದನಾ ವಿಜಯ್​ ರಾಘವೇಂದ್ರ (Spandana Vijay Raghavendra) ಅವರ ನಿಧನದಿಂದ ಚಿತ್ರದ ರಿಲೀಸ್​ ದಿನಾಂಕ ಮುಂದೆ ಹೋಯಿತು. ಈ ಸಿನಿಮಾದ ಸುದ್ದಿಗೋಷ್ಠಿ ಶನಿವಾರ (ಆಗಸ್ಟ್​ 26) ನಡೆಯಿತು. ಈ ವೇಳೆ ವೇದಿಕೆಯಲ್ಲಿ ವಿಜಯ್​ ರಾಘವೇಂದ್ರ ಮಾತನಾಡಿದರು. ಇತ್ತೀಚೆಗೆ ತಮ್ಮ ಜೀವನದ ಕಷ್ಟದ ದಿನಗಳಲ್ಲಿ ಬೆಂಬಲವಾಗಿ ನಿಂತಿದ್ದ ಎಲ್ಲರನ್ನೂ ನೆನಪಿಸಿಕೊಂಡು ಅವರು ಭಾವುಕರಾದರು. ‘ನೀವೆಲ್ಲರೂ ತಾಯಿ ಸ್ಥಾನದಲ್ಲಿ ನಿಂತು ನನ್ನನ್ನು ಸಂತೈಸಿದ್ದೀರಿ. ಯಾರೂ ಹೊರಗಿನವರ ರೀತಿ ನಡೆದುಕೊಳ್ಳಲಿಲ್ಲ. ಕಣ್ಣೀರು ಹಾಕಬಾರದು ಎಂದುಕೊಂಡು ಇಲ್ಲಿಗೆ ಬಂದೆ. ಯಾಕೆಂದರೆ, ಸ್ಪಂದನಾಗೂ ಅದು ಇಷ್ಟ ಆಗುತ್ತಿರಲಿಲ್ಲ’ ಎಂದು ಹೇಳುತ್ತಾ ವಿಜಯ್ ರಾಘವೇಂದ್ರ ಭಾವುಕರಾಗಿ ಗಳಗಳನೆ ಅತ್ತರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.