ವಿಜಯನಗರ: ರೈತರಿಗೆ ಕನ್ಯಾ ಕೊಡಲಿ ಎಂದು ಬರೆದು ರಥೋತ್ಸವಕ್ಕೆ ಬಾಳೆ ಹಣ್ಣು ಎಸೆದ ಯುವಕ

Edited By:

Updated on: Feb 02, 2023 | 9:44 AM

ಹಗರಿಬೊಮ್ಮನ ಹಳ್ಳಿ ತಾಲೂಕಿನ ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವದಲ್ಲಿ ಯುವಕನೊಬ್ಬ ರೈತರಿಗೆ ಕನ್ಯಾ ಕೊಡುವಂತಾಗಲಿ ಎಂದು ಬರೆದು ರಥೋತ್ಸವಕ್ಕೆ ಬಾಳೆ ಹಣ್ಣು ಎಸೆದಿದ್ದಾನೆ

ವಿಜಯನಗರ: ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ತಾಲೂಕಿನ ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವದಲ್ಲಿ ಯುವಕನೊಬ್ಬ ರೈತರಿಗೆ ಕನ್ಯಾ ಕೊಡಲಿ ಎಂದು ಬಾಳೆಹಣ್ಣಿನ ಮೇಲೆ ಬರೆದು ಎಸೆದಿದ್ದಾನೆ.  ದೇಶದ ಬಹುದೊಡ್ಡ ಸಮಸ್ಯೆಗಳಲ್ಲಿ ಒಂದಾದ ರೈತರಿಗೆ ಹೆಣ್ಣು ಕೊಡದೇ ಇರುವುದು. ಕೇವಲ ನೌಕರರಿಗೆ ಮಾತ್ರ ಹೆಣ್ಣನ್ನು ಕೊಡುತ್ತಿದ್ದು, ಹೆಣ್ಣೆತ್ತವರ ಮನಸ್ಸು ಬದಲಾಗಲಿ ರೈತರಿಗೆ ಕನ್ಯಾ ಕೊಡಲಿ ಎಂದು ತಾಯಿ ದುರ್ಗಾ ಮಾತೆಗೆ ಯುವಕ ಬರಹದ ಬಾಳೆಹಣ್ಣನ್ನು ರೈತರ ಪರವಾಗಿ ಸಮರ್ಪಣೆ ಮಾಡಿದ್ದಾನೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ