ವಿಜಯಪುರದಲ್ಲಿ ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಫೋಟೋ ಅಂಟಿಸಿದ್ದನ್ನು ಬಿಜೆಪಿ ಯುವ ಮೋರ್ಚಾ ಸಮರ್ಥಿಸಿಕೊಂಡಿದೆ
ಸಾವರ್ಕರ್ ಬರೆದ ಆರು ಪತ್ರಗಳ ಬಗ್ಗೆ ಮಾತ್ರ ಮಾತಾಡುವ ಕಾಂಗ್ರೆಸ್ ಅವರು ಸುಮಾರು 40 ವರ್ಷಗಳ ಕಾಲ ದೇಶಕ್ಕಾಗಿ ಶ್ರಮಿಸಿದ್ದನ್ನು ಮರೆತುಬಿಡುತ್ತಾರೆ ಎಂದು ಅವರು ಹೇಳಿದರು.
ವಿಜಯಪುರ: ವೀರ್ ಸಾವರ್ಕರ್ (Veer Savarakar) ಅವರ ಪೋಟೋ ವಿವಾದ ಕೊನೆಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ ಮಾರಾಯ್ರೇ. ವಿಜಯಪುರದಲ್ಲಂತೂ (Vijayapura) ಇದು ಮತ್ತೊಂದು ಹಂತ ತಲುಪಿದೆ. ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಘಟಕದ ಅಧ್ಯಕ್ಷ ಮತ್ತು ಸದಸ್ಯರು ಜಿಲ್ಲಾ ಕಾಂಗ್ರೆಸ್ ಕಚೇರಿಯ ಗೋಡೆಗಳಿಗೆ ಸಾವರ್ಕರ್ ಅವರ ಫೋಟೋಗಳನ್ನು ಅಂಟಿಸಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತಾಡಿದ ಮೋರ್ಚಾದ ಉಪಾಧ್ಯಕ್ಷ ಬಸವರಾಜ ಹೂಗಾರ (Basavaraj Hugar) ಅದನ್ನು ಸಮರ್ಥಿಸಿಕೊಂಡಿದ್ದಾರೆ. ಸಾವರ್ಕರ್ ಬರೆದ ಆರು ಪತ್ರಗಳ ಬಗ್ಗೆ ಮಾತ್ರ ಮಾತಾಡುವ ಕಾಂಗ್ರೆಸ್ ಅವರು ಸುಮಾರು 40 ವರ್ಷಗಳ ಕಾಲ ದೇಶಕ್ಕಾಗಿ ಶ್ರಮಿಸಿದ್ದನ್ನು ಮರೆತುಬಿಡುತ್ತಾರೆ ಎಂದು ಅವರು ಹೇಳಿದರು.
