ವಾರಕರಿ ನೃತ್ಯ ಮಾಡಿದ ಶಾಸಕ: ಯತ್ನಾಳ್ ಕುಣಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ರಾಮಭಕ್ತರು
ವಿಜಯಪುರದಲ್ಲಿ ಇಂದು ಅಯೋಧ್ಯೆಯ ರಾಮ ಮಂದಿರದಿಂದ ಬಂದ ಮಂತ್ರಾಕ್ಷತೆ ಕಳಸದ ಭವ್ಯ ಮೆರವಣಿಗೆ ಮಾಡಲಾಗಿದೆ. ಈ ವೇಳೆ ಶಾಸಕ ಬಸನಗೌಡ ಪಾಟಿಲ್ ಯತ್ನಾಳ್ ಮೆರವಣಿಗೆಯಲ್ಲಿ ಪಂಡರಪೂರ ವಿಠಲನ ಸಾಂಪ್ರದಾಯಿಕ ವಾರಕರಿ ನೃತ್ಯ ಮಾಡಿದ್ದಾರೆ. ಸದ್ಯ ಶಾಸಕ ಯತ್ನಾಳ್ ಡ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವಿಜಯಪುರ, ಡಿಸೆಂಬರ್ 22: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ಇಂದು ರಾಮ ಮಂದಿರದಿಂದ ಬಂದ ಮಂತ್ರಾಕ್ಷತೆ ಕಳಸದ ಭವ್ಯ ಮೆರವಣಿಗೆ ಮಾಡಲಾಗಿದೆ. ಈ ವೇಳೆ ಶಾಸಕ ಬಸನಗೌಡ ಪಾಟಿಲ್ ಯತ್ನಾಳ್ (Basangouda Patil Yatnal) ಮೆರವಣಿಗೆಯಲ್ಲಿ ಪಂಡರಪೂರ ವಿಠಲನ ಸಾಂಪ್ರದಾಯಿಕ ವಾರಕರಿ ನೃತ್ಯ ಮಾಡಿದ್ದಾರೆ. ಕೈ ಕೈ ಹಿಡಿದು ವಾರಕರಿ ನೃತ್ಯ ಮಾಡಿದ ಯತ್ನಾಳ್ ಕುಣಿತಕ್ಕೆ ರಾಮ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಶಾಸಕ ಯತ್ನಾಳ್ ಡ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.‘
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Dec 22, 2023 08:13 PM