Loading video

ಐತಿಹಾಸಿಕ ದರ್ಗಾಕೆ ಒಂದೇ ದಿನ ಮೂವರು ಸಚಿವರು, ಇಬ್ಬರು ಶಾಸಕರ ಭೇಟಿ; ಇಲ್ಲಿದೆ ವಿಡಿಯೋ

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 21, 2023 | 9:22 PM

ನಗರದ ಗೋಳಗುಮ್ಮಟ ಬಳಿಯ ಐತಿಹಾಸಿಕ ಹಾಸಿಂಪೀರ್ ದರ್ಗಾಕೆ ಒಂದೇ ದಿನ ಮೂವರು ಸಚಿವರು ಹಾಗೂ ಇಬ್ಬರು ಶಾಸಕರು ಭೇಟಿ ನೀಡಿದ್ದಾರೆ. ಸಚಿವ ಎಚ್ ಕೆ ಪಾಟೀಲ್ (HK Patil) ದರ್ಗಾಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಜೊತೆಗೆ  ಶಾಸಕರಾದ ಅಶೋಕ್ ಮನಗೂಳಿ ಹಾಗೂ ವಿಠಲ್ ಕಟಕಕೊಂಡ, ದರ್ಗಾದ ಧರ್ಮಗುರುಗಳಾದ ಸಯ್ಯದ್ ಸಹಾ ಮುರ್ಷೀದ್ ಪೀರಾ ಸಜ್ಜಾದೆ ಭೇಟಿ ಮಾಡಿ ಆಶೀರ್ವಾದ ಪಡೆದರು.

ವಿಜಯಪುರ, ನ.21: ನಗರದ ಗೋಳಗುಮ್ಮಟ ಬಳಿಯ ಐತಿಹಾಸಿಕ ಹಾಸಿಂಪೀರ್ ದರ್ಗಾಕೆ ಒಂದೇ ದಿನ ಮೂವರು ಸಚಿವರು ಹಾಗೂ ಇಬ್ಬರು ಶಾಸಕರು ಭೇಟಿ ನೀಡಿದ್ದಾರೆ. ಸಚಿವ ಎಚ್ ಕೆ ಪಾಟೀಲ್ (HK Patil) ದರ್ಗಾಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಜೊತೆಗೆ  ಶಾಸಕರಾದ ಅಶೋಕ್ ಮನಗೂಳಿ ಹಾಗೂ ವಿಠಲ್ ಕಟಕಕೊಂಡ, ದರ್ಗಾದ ಧರ್ಮಗುರುಗಳಾದ ಸಯ್ಯದ್ ಸಹಾ ಮುರ್ಷೀದ್ ಪೀರಾ ಸಜ್ಜಾದೆ ಭೇಟಿ ಮಾಡಿ ಆಶೀರ್ವಾದ ಪಡೆದರು. ಇಂದು ಬೆಳಿಗ್ಗೆ ಗೃಹ ಸಚಿವ ಜಿ‌ ಪರಮೇಶ್ವರ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಕೂಡ ದರ್ಗಾಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ನಿನ್ನೆ ಸಿಎಂ ಸಿದ್ದರಾಮಯ್ಯ, ಧರ್ಮ ಗುರುಗಳಾದ ಸೈಯದ್ ತನ್ವಿರ ಪೀರಾ ಹಾಶ್ಮಿ ಅವರನ್ನ ಭೇಟಿ ಮಾಡಿದ್ದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ