ಗಾಯಗಳಿಗೆ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗುವ ಮೊದಲು ಹಾರೈಸಿದವರಿಗೆಲ್ಲ ವಿಡಿಯೋ ಮೂಲಕ ಧನ್ಯವಾದ ಹೇಳಿದ ವೀಣಾ ಕಾಶಪ್ಪನವರ್

ಗಾಯಗಳಿಗೆ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗುವ ಮೊದಲು ಹಾರೈಸಿದವರಿಗೆಲ್ಲ ವಿಡಿಯೋ ಮೂಲಕ ಧನ್ಯವಾದ ಹೇಳಿದ ವೀಣಾ ಕಾಶಪ್ಪನವರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 21, 2023 | 7:04 PM

ತಮಗಾದ ಗಾಯಗಳು ಗಂಭೀರ ಸ್ವರೂಪದಲ್ಲದ ಕಾರಣ ಯಾರೂ ಚಿಂತಿಸಬೇಕಿಲ್ಲ ಮತ್ತು ಡಿಸ್ಚಾರ್ಜ್ ಆಗುತ್ತಿರುವುದರಿಂದ ಯಾರೂ ಅಸ್ಪತ್ರೆಗೆ ಬರಬಾರದೆಂದು ವಿನಂತಿಸಿಕೊಂಡಿದ್ದಾರೆ. ಅಕಾಡೆಮಿಯೊಂದರ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 23 ರಂದು ಬಾಗಲಕೋಟೆಗೆ ಆಗಮಿಸುತ್ತಿರುವುದರಿಂದ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಬೇಕೆಂದು ವೀಣಾ ವಿನಂತಿಸಿಕೊಂಡಿದ್ದಾರೆ.

ವಿಜಯಪುರ: ನಿನ್ನೆ ಮುಖ್ಯಮಂತ್ರಿಯವರ ಕಾರ್ಯಕ್ರಮ (CM’s programme) ಮುಗಿಸಿಕೊಂಡು ವಿಜಯಪುರದಿಂದ ಸಿಂದಗಿ ಕಡೆ ತೆರಳುತ್ತಿದ್ದಾಗ ಹನುಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ (Vijayanand Kashappanavar) ಪತ್ನಿ ವೀಣಾ ಕಾಶಪ್ಪನವರ್ (Veena Kashappanavar) ಕಾರು ನಗರದ ಹೊರವಲಯದಲ್ಲಿ ಅಪಘಾತಕ್ಕೀಡಾದ ವರದಿ ಮಾಡಿದ್ದೇವೆ. ಸಣ್ಣಪುಟ್ಟ ಗಾಯಳೊಂದಿಗೆ ಪಾರಾಗಿದ್ದ ವೀಣಾರನ್ನು ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಗಾಯಗಳಿಗೆ ಚಿಕಿತ್ಸೆ ಪಡೆದಿರುವ ಅವರು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮೊದಲು ವಿಡಿಯೋವೊಂದನ್ನು ಬಿಡುಗಡೆ ಮಾಡಿ ತಮ್ಮ ಆರೋಗ್ಯದ ಸ್ಟೇಟಸ್ ನೀಡುವ ಜೊತೆಗೆ ತಾನು ಶೀಘ್ರ ಗುಣಮುಖರಾಗಲು ಪ್ರಾರ್ಥಿಸಿ ಹಾರೈಸಿರುವ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ತಮಗಾದ ಗಾಯಗಳು ಗಂಭೀರ ಸ್ವರೂಪದಲ್ಲದ ಕಾರಣ ಯಾರೂ ಚಿಂತಿಸಬೇಕಿಲ್ಲ ಮತ್ತು ಡಿಸ್ಚಾರ್ಜ್ ಆಗುತ್ತಿರುವುದರಿಂದ ಯಾರೂ ಅಸ್ಪತ್ರೆಗೆ ಬರಬಾರದೆಂದು ವಿನಂತಿಸಿಕೊಂಡಿದ್ದಾರೆ. ಅಕಾಡೆಮಿಯೊಂದರ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 23 ರಂದು ಬಾಗಲಕೋಟೆಗೆ ಆಗಮಿಸುತ್ತಿರುವುದರಿಂದ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಬೇಕೆಂದು ವೀಣಾ ವಿನಂತಿಸಿಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ