ವಿಶ್ವ ಮೀನುಗಾರಿಕೆ ದಿನಾಚರಣೆ ಕಾರ್ಯಕ್ರಮದಲ್ಲಿ ಎಡವಟ್ಟು ಮಾಡಿದ ಸಚಿವ ವೈದ್ಯ, ಡಿಕೆ ಶಿವಕುಮಾರ್ ಅವರನ್ನೂ ಮುಖ್ಯಮಂತ್ರಿ ಅಂದುಬಿಟ್ಟರು!

ಆದರೆ ಮುಂದುವರಿದು ಮಾತಾಡುವ ಅವರು, ರಾಜ್ಯದ ಎಲ್ಲ ಧರ್ಮ, ಜಾತಿ ಜನಾಂಗಗಳು ನೆಮ್ಮದಿಯಿಂದ ಬಾಳಬೇಕು ಎಂಬ ಉದ್ದೇಶ ಇಟ್ಟುಕೊಡಿರುವ ರಾಜ್ಯದ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅನ್ನುತ್ತಾರೆ! ವೈದ್ಯ ಇದನ್ನು ಹೇಳುವಾಗ ಕೆಮೆರಾ ಅವರ ಮೇಲೆಯೇ ಫೋಕಸ್ಡ್ ಆಗಿದ್ದರಿಂದ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರ ರಿಯಾಕ್ಷನ್ ಗಳು ಹೇಗಿದ್ದವು ಅಂತ ನೋಡಲಾಗಲ್ಲ.

ವಿಶ್ವ ಮೀನುಗಾರಿಕೆ ದಿನಾಚರಣೆ ಕಾರ್ಯಕ್ರಮದಲ್ಲಿ ಎಡವಟ್ಟು ಮಾಡಿದ ಸಚಿವ ವೈದ್ಯ, ಡಿಕೆ ಶಿವಕುಮಾರ್ ಅವರನ್ನೂ ಮುಖ್ಯಮಂತ್ರಿ ಅಂದುಬಿಟ್ಟರು!
|

Updated on: Nov 21, 2023 | 6:21 PM

ಬೆಂಗಳೂರು: ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ವಿಧಾನ ಸೌಧದಲ್ಲಿಂದು ವಿಶ್ವ ಮೀನುಗಾರಿಕೆ ದಿನ (World Fisheries Day) ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ; ಸ್ವಾಗತ ಭಾಷಣ ಮಾಡುವಾಗ ಮಾಡಿದ ಎಡವಟ್ಟು ಕೆಲವರಿಗೆ ಖುಷಿ ನೀಡಿದರೆ ಕೆಲವರಿಗೆ ಇರುಸು ಮುರುಸು ಉಂಟು ಮಾಡಿರುತ್ತದೆ. ಅವರ ಭಾಷಣದ ಆರಂಭಿಕ ಹಂತವನ್ನು ಗಮನಿಸಿ. ರಾಜ್ಯದ ಅನ್ನದಾತ ಮತ್ತು ಮೀನುಗಾರಿಕೆಗೆ ಪೂರಕವಾದ ಸವಲತ್ತ್ತುಗಳನ್ನು ಕಲ್ಪಿಸುತ್ತಿರುವ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯನವರೇ (CM Siddaramaiah) ಅಂತ ಹೇಳುತ್ತಾರೆ. ಅದು ಸರಿ, ಜನ ತಮ್ಮ ಬಾಸ್ ಗಳನ್ನು ಇಂಪ್ರೆಸ್ ಮಾಡಲು ಹಲವಾರು ನಾಮವಿಶೇಷಣಗಳನ್ನು ಬಳಸುತ್ತಾರೆ, ಅದರಲ್ಲಿ ವಿಶೇಷವೇನೂ ಇಲ್ಲ. ಆದರೆ ಮುಂದುವರಿದು ಮಾತಾಡುವ ಅವರು, ರಾಜ್ಯದ ಎಲ್ಲ ಧರ್ಮ, ಜಾತಿ ಜನಾಂಗಗಳು ನೆಮ್ಮದಿಯಿಂದ ಬಾಳಬೇಕು ಎಂಬ ಉದ್ದೇಶ ಇಟ್ಟುಕೊಡಿರುವ ರಾಜ್ಯದ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ (DK Shivakumar) ಅನ್ನುತ್ತಾರೆ! ವೈದ್ಯ ಇದನ್ನು ಹೇಳುವಾಗ ಕೆಮೆರಾ ಅವರ ಮೇಲೆಯೇ ಫೋಕಸ್ಡ್ ಆಗಿದ್ದರಿಂದ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರ ರಿಯಾಕ್ಷನ್ ಗಳು ಹೇಗಿದ್ದವು ಅಂತ ನೋಡಲಾಗಲ್ಲ. ಸಂಪುಟ ಪುನಾರಚನೆ ಮಾಡುವಾಗ ಮಂಕಾಳ ವೈದ್ಯ ಮಂತ್ರಿ ಸ್ಥಾನ ಉಳಿಸಿಕೊಳ್ಳುವುದು ಕಷ್ಟ ಎಂಬ ಸಂದೇಹ ಕನ್ನಡಿಗರಲ್ಲಿ ಮೂಡಿರೋದಂತು ಸತ್ಯ ಮಾರಾಯ್ರೇ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
1 ಆಧಾರ್​ ಕಾರ್ಡ್​ನ 2 ಪ್ರತಿ ತೋರಿಸಿ KSRTCಯಲ್ಲಿ ಇಬ್ಬರು ಮಹಿಳೆಯರ ಪ್ರಯಾಣ
1 ಆಧಾರ್​ ಕಾರ್ಡ್​ನ 2 ಪ್ರತಿ ತೋರಿಸಿ KSRTCಯಲ್ಲಿ ಇಬ್ಬರು ಮಹಿಳೆಯರ ಪ್ರಯಾಣ
ಭಾರತ-ಆಫ್ರಿಕಾ ಟಿ20 ಟ್ರೋಫಿ ಫೋಟೋ ಶೂಟ್​ನಲ್ಲಿ ಮಿಂಚಿದ ಸೂರ್ಯ: ವಿಡಿಯೋ
ಭಾರತ-ಆಫ್ರಿಕಾ ಟಿ20 ಟ್ರೋಫಿ ಫೋಟೋ ಶೂಟ್​ನಲ್ಲಿ ಮಿಂಚಿದ ಸೂರ್ಯ: ವಿಡಿಯೋ
‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು
‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು
ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ
ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ
‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ
‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ