Loading video

ವಕ್ಫ್ ಬೋರ್ಡ್ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ವಿಜಯೇಂದ್ರ ಯಾವತ್ತೂ ಭಾಗಿಯಾಗಿಲ್ಲ: ಯತ್ನಾಳ್

|

Updated on: Nov 26, 2024 | 5:37 PM

ಚುನಾವಣೆಗಳಲ್ಲಿ ಗೆದ್ದಾಗ ಎಲ್ಲ ಶ್ರೇಯಸ್ಸನ್ನು ಬಾಚಿಕೊಳ್ಳುವ ಯಡಿಯೂರಪ್ಪ ಮತ್ತು ವಿಜಯೇಂದ್ರ ಪಕ್ಷ ಸೋತಾಗಲೂ ಹೊಣೆ ಹೊತ್ತುಕೊಳ್ಳಬೇಕು, ಚುನಾವಣೆಯಲ್ಲಿ ಗೆದ್ದಾಗ ಯಾವುದಾದರೂ ಮೀಡಿಯಾ ಯತ್ನಾಳ್ ಪ್ರಯತ್ನಗಳಿಂದ ಗೆದ್ದಿತು ಅಂತ ಹೇಳುತ್ತದೆಯೇ? ಗೆದ್ದಾಗ ಮಾತ್ರ ಧೀಮಂತ ನಾಯಕ ಅಂತ ಹೊಗಳಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದು ಯತ್ನಾಳ್ ಹೇಳಿದರು.

ಕಲಬುರಗಿ: ವಕ್ಫ್ ಬೋರ್ಡ್ ವಿರುದ್ಧ ಜಾಗೃತಿ ಅಭಿಯಾನ ನಡೆಸುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಮ್ಮ ವರದಿಗಾರನೊಂದಿಗೆ ಮಾತಾಡಿ, ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಿವೈ ವಿಜಯೇಂದ್ರ ರೈತರ ಪರವಾಗಿ ಹೋರಾಡುತ್ತಿರುವ ಕಾರ್ಯಕರ್ತರನ್ನು ಲೀಡ್ ಮಾಡುವಂತೆ ಬಿಎಸ್ ಯಡಿಯೂರಪ್ಪ ಹೇಳಬೇಕು, ವಿಜಯೇಂದ್ರ ಇದುವರೆಗೆ ಹೋರಾಟದಲ್ಲಿ ಭಾಗಿಯಾಗಿಲ್ಲ, ವಯಸ್ಸಾಗಿರುವ ಯಡಿಯೂರಪ್ಪ ಮಗನಿಗೆ ಬುದ್ಧಿವಾದ ಹೇಳಲಾಗದಿದ್ದರೆ ಮಕ್ಕಳು ಮರಿಮೊಮ್ಮಕ್ಕಳೊಂದಿಗೆ ಆಟವಾಡಿಕೊಂಡು ಮನೆಯಲ್ಲಿರಲಿ, ಬೇರೆಯವರಿಗೆ ಉಪದೇಶ ಮಾಡೋದು ಬೇಡ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಕಾರ್ಯಕರ್ತರಿಗೆ ಹೊಸ ಸಂದೇಶ: ವಿಜಯೇಂದ್ರಗೆ ಮತ್ತೊಂದು ಶಾಕ್ ಕೊಟ್ಟ ಯತ್ನಾಳ್​