ಅವಧಿ ಪೂರ್ತಿಗೊಳ್ಳುವ ಮೊದಲೇ ವಿಧಾನ ಸಭೆ ವಿಸರ್ಜಿಸುವ ಬಗ್ಗೆ ತನಗೆ ಗೊತ್ತಿಲವೆಂದರು ವಿಜಯೇಂದ್ರ

ಅವಧಿ ಪೂರ್ತಿಗೊಳ್ಳುವ ಮೊದಲೇ ವಿಧಾನ ಸಭೆ ವಿಸರ್ಜಿಸುವ ಬಗ್ಗೆ ತನಗೆ ಗೊತ್ತಿಲವೆಂದರು ವಿಜಯೇಂದ್ರ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 25, 2022 | 12:27 PM

ಅವಧಿ ಮುನ್ನವೇ ವಿಧಾನ ಸಭೆಯನ್ನು ವಿಸರ್ಜಿಸಿ ಚುನಾವಣೆಗೆ ನಡೆಸಲಾಗುತ್ತದೆಯೇ ಅಂತ ಕೇಳಿದ ಪ್ರಶ್ನೆಗೆ, ಅದನ್ನು ಚುನಾವಣಾ ಆಯೋಗ ನಿರ್ಧರಿಸುತ್ತದೆ, ವಿಧಾನ ಸಭೆಯನ್ನು ವಿಸರ್ಜಿಸುವ ಬಗ್ಗೆ ಹೇಳಲು ತಾವು ಸಚಿವನಲ್ಲ ಎಂದರು.

ಕೊಪ್ಪಳ: ಸೋಮವಾರದಂದು ಕೊಪ್ಪಳದಲ್ಲಿ (Koppal) ಸುದ್ದಿಗಾರರೊಂದಿಗೆ ಮಾತಾಡಿದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ (BY Vijayendra), ಚುನಾವಣೆಗೆ ಇನ್ನೂ 8-10 ತಿಂಗಳಿರುವಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಕಿತ್ತಾಟ ನಡೆದಿರುವುದು ಹಾಸ್ಯಾಸ್ಪದವಾಗಿದೆ (ridiculous) ಎಂದರು. ಅವಧಿ ಮುನ್ನವೇ ವಿಧಾನ ಸಭೆಯನ್ನು ವಿಸರ್ಜಿಸಿ ಚುನಾವಣೆಗೆ ನಡೆಸಲಾಗುತ್ತದೆಯೇ ಅಂತ ಕೇಳಿದ ಪ್ರಶ್ನೆಗೆ, ಅದನ್ನು ಚುನಾವಣಾ ಆಯೋಗ ನಿರ್ಧರಿಸುತ್ತದೆ, ವಿಧಾನ ಸಭೆಯನ್ನು ವಿಸರ್ಜಿಸುವ ಬಗ್ಗೆ ಹೇಳಲು ತಾವು ಸಚಿವನಲ್ಲ ಎಂದರು.