ಯುದ್ಧ ಆರಂಭವಾಗುವ ಮೊದಲೇ ಉಕ್ರೇನಿಂದ ಸ್ವದೇಶಕ್ಕೆ ಬಂದ ಸ್ನೇಹಾ ಪಾಟೀಲ್ ಅಲ್ಲೇ ಉಳಿದಿರುವವರ ಬಗ್ಗೆ ಆತಂಕ ವ್ಯಕ್ತಪಡಿಸಿದರು

ಯುದ್ಧ ಆರಂಭವಾಗುವ ಮೊದಲೇ ಉಕ್ರೇನಿಂದ ಸ್ವದೇಶಕ್ಕೆ ಬಂದ ಸ್ನೇಹಾ ಪಾಟೀಲ್ ಅಲ್ಲೇ ಉಳಿದಿರುವವರ ಬಗ್ಗೆ ಆತಂಕ ವ್ಯಕ್ತಪಡಿಸಿದರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 26, 2022 | 10:07 PM

ಭಾರತದ ಇನ್ನೂ ಅನೇಕ ವಿದ್ಯಾರ್ಥಿಗಳು ಅಲ್ಲೇ ಉಳಿದಿದ್ದಾರೆ ಮತ್ತು ಅವರು ಗಾಬರಿ ಹಾಗೂ ಆತಂಕದಲ್ಲಿದ್ದಾರೆಂದು ಸ್ನೇಹಾ ಹೇಳಿದರು. ಅಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ, ಭಯ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.

ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರುವ ಮೊದಲೇ ಆ ದೇಶದಲ್ಲಿ ಓದುತ್ತಿರುವ ಭಾರತದ ಮಕ್ಕಳ ಪೈಕಿ ಕೆಲವರು ಸ್ವದೇಶಕ್ಕೆ ಬಂದುಬಿಟ್ಟಿದ್ದಾರೆ. ಅವರಲ್ಲಿ ವಿಜಯಪುರದ (Vijayapura) ಸ್ನೇಹಾ ಪಾಟೀಲ್ (Sneha Patil) ಒಬ್ಬರು. ಸ್ನೇಹಾ ಉಕ್ರೇನಲ್ಲಿ ವೈದ್ಯಕೀಯ (Medical) ವ್ಯಾಸಂಗ ಮಾಡುತ್ತಿದ್ದಾರೆ. ವಿಜಯಪುರ ಟಿವಿ9 ವರದಿಗಾರ ಸ್ನೇಹಾ ಅವರೊಂದಿಗೆ ಮಾತಾಡಿ ಉಕ್ರೇನಲ್ಲಿರುವ ಪರಸ್ಥಿತಿ, ಅವರ ಅನುಭವ ಮತ್ತು ಇನ್ನೂ ಅಲ್ಲೇ ಉಳಿದು ನೆರವಿಗಾಗಿ ಭಾರತ ಸರ್ಕಾರದ ಮೊರೆಹೊಕ್ಕಿರುವ ಅನೇಕ ವಿದ್ಯಾರ್ಥಿಗಳ ಬಗ್ಗೆ ಕೇಳಿದ್ದಾರೆ. ಅಸಲಿಗೆ ಯುದ್ಧ ಆಗುವುದಿಲ್ಲ, ಬಹಳ ವರ್ಷಗಳಿಂದ ರಷ್ಯಾ ಹೀಗೆ ಹೆದರಿಸುತ್ತಿದೆ, ನೀವು ಹೆದರುವ ಅಗತ್ಯವಿಲ್ಲ ಎಂದು ಸ್ನೇಹ ಓದುವ ಮೆಡಿಕಲ್ ಕಾಲೇಜಿನ ಮುಖ್ಯಸ್ಥರು ಹೇಳುತ್ತಿದ್ದರಂತೆ. ಭಾರತೀಯ ವಿದ್ಯಾರ್ಥಿಗಳು ಪಾಠಗಳ್ನು ಆನ್ಲೈನ್ ಅಟೆಂಡ್ ಮಾಡುವುದಾಗಿ ಕೋರಿದಾಗಲೂ ಅವರು ಒಪ್ಪಿರಲಿಲ್ಲ. ಕೊನೆಗೆ, ಒತ್ತಡ ಜಾಸ್ತಿಯಾದಾಗ ಅಲ್ಲೇ ಇರುವವರಿಗೆ ಆಫ್ಲೈನ್ ಮತ್ತು ವಾಪಸ್ಸು ಬಂದಿರುವ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿ ಅಟೆಂಡ್ ಮಾಡಲು ಅನುಮತಿ ನೀಡಲಾಯಿತು ಎಂದು ಸ್ನೇಹಾ ಹೇಳಿದರು.

ಭಾರತದ ಇನ್ನೂ ಅನೇಕ ವಿದ್ಯಾರ್ಥಿಗಳು ಅಲ್ಲೇ ಉಳಿದಿದ್ದಾರೆ ಮತ್ತು ಅವರು ಗಾಬರಿ ಹಾಗೂ ಆತಂಕದಲ್ಲಿದ್ದಾರೆಂದು ಸ್ನೇಹಾ ಹೇಳಿದರು. ಅಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ, ಭಯ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು. ಶೆಲ್ಲಿಂಗ್ ಮತ್ತು ಬಾಂಬ್ ಗಳ ಸದ್ದು ಮೊದಲು ದೂರದಲ್ಲಿ ಕೇಳಿಸುತಿತ್ತು, ಈಗ ಹತ್ತಿರದಲ್ಲೇ ಕೇಳುತ್ತಿದೆ ಅಂತ ಸಹಪಾಠಿಗಳು ಮೆಸೇಜ್ ಮಾಡುತ್ತಿದ್ದಾರೆ ಎಂದು ಸ್ನೇಹಾ ಹೇಳಿದರು.

ಅವರನ್ನು ಆದಷ್ಟು ಬೇಗ ಭಾರತಕ್ಕೆ ವಾಪಸ್ಸು ಕರೆಸಿಕೊಳ್ಳುವ ವ್ಯವಸ್ಥೆ ಆಗಬೇಕು ಎಂದು ಉಕ್ರೇನಲ್ಲಿ ಸಿಲುಕಿ ಸಹಾಯಕ್ಕಾಗಿ ಭಾರತ ಮತ್ತು ಕರ್ನಾಟಕ ಸೇರಿದಂತೆ ಆಯಾ ರಾಜ್ಯಗಳ ಮೊರೆ ಹೊಕ್ಕಿರುವ ವಿದ್ಯಾರ್ಥಿಗಳ ಪರ ಸ್ನೇಹಾ ಕಳಕಳಿ ವ್ಯಕ್ತಪಡಿಸಿದರು.

ಇದನ್ನೂ ಓದಿ:  Ukraine Updates: ಉಕ್ರೇನ್ ದೇಶದ​ ನೆರವಿಗೆ ನಿಂತ ಅಮೆರಿಕ, ಭಾರತದ 219 ವಿದ್ಯಾರ್ಥಿಗಳಿದ್ದ ವಿಮಾನ ಮುಂಬೈಗೆ ಆಗಮನ