ಕೆ-ಸಿಇಟಿಯಲ್ಲಿ ವಿಜಯಪುರದ ವಿದ್ಯಾರ್ಥಿಗೆ ಟಾಪ್ 1ಕ್ಕಿಂತ ದೊಡ್ಡ ರ್ಯಾಂಕ್, ಹೇಗಿದು?

Edited By:

Updated on: Jun 12, 2026 | 6:17 PM

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ 2025-26ನೇ ಸಾಲಿಗೆ ನಡೆಸಿದ ಕರ್ನಾಟಕ ಸಾಮಾನ್ಯ ಅರ್ಹತಾ ಪರೀಕ್ಷೆಯಲ್ಲಿ ವಿಜಯಪುರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಗಂಗಾಧರ ಮುತ್ತಗಿಗೆ ವಿಶೇಷ ರ್ಯಾಕ್ ನೀಡಲಾಗಿದೆ.ಹೌದು..ಕೆಇಎ, ವೆಟರ್ನರಿ ವಿಭಾಗದಲ್ಲಿ ಗಂಗಾಧರಗೆ ಟಾಪ್ 1ಕ್ಕಿಂತ ದೊಡ್ಡ ರ್ಯಾಂಕ್ ನೀಡಿದೆ. ಇತ್ತೀಚೆಗೆ ಪ್ರಕಟವಾದ ಕೆ-ಸಿಇಟಿ ಫಲಿತಾಂಶದಲ್ಲಿ ತಾಂತ್ರಿಕ ದೋಷಗಳಿಂದ ಕೆಲವು ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗದ ಹಿನ್ನೆಲೆಯಲ್ಲಿ ಕೆಇಎ ಸ್ಪಾಟ್ ರ್‍ಯಾಂಕಿಂಗ್‌ ವ್ಯವಸ್ಥೆಯನ್ನು ಅಳವಡಿಸಿಕೊಂಡಿತ್ತು. ಅದರ ಆಧಾರದ ಮೇಲೆ ಗಂಗಾಧರ ಮುತ್ತಗಿ ವೆಟರ್ನರಿ ಸೈನ್ಸ್‌ನಲ್ಲಿ 0.5 ರ್‍ಯಾಂಕ್‌ ಹಾಗೂ ಬಿಎಸ್‌ಸಿ ಅಗ್ರಿಯಲ್ಲಿ 3.5 ರ್‍ಯಾಂಕ್‌ ಗಳಿಸಿ ವಿಶಿಷ್ಟ ಸಾಧನೆ ಮಾಡಿದ್ದಾರೆ.

ಧಾರವಾಡ/ ವಿಜಯಪುರ, (ಜೂನ್ 12): ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (KEA) 2025-26ನೇ ಸಾಲಿಗೆ ನಡೆಸಿದ ಕರ್ನಾಟಕ ಸಾಮಾನ್ಯ ಅರ್ಹತಾ ಪರೀಕ್ಷೆಯಲ್ಲಿ (KCET) ವಿಜಯಪುರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಗಂಗಾಧರ ಮುತ್ತಗಿಗೆ ವಿಶೇಷ ರ್ಯಾಕ್ ನೀಡಲಾಗಿದೆ.ಹೌದು..ಕೆಇಎ, ವೆಟರ್ನರಿ ವಿಭಾಗದಲ್ಲಿ ಗಂಗಾಧರಗೆ ಟಾಪ್ 1ಕ್ಕಿಂತ ದೊಡ್ಡ ರ್ಯಾಂಕ್ ನೀಡಿದೆ. ಇತ್ತೀಚೆಗೆ ಪ್ರಕಟವಾದ ಕೆ-ಸಿಇಟಿ ಫಲಿತಾಂಶದಲ್ಲಿ ತಾಂತ್ರಿಕ ದೋಷಗಳಿಂದ ಕೆಲವು ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗದ ಹಿನ್ನೆಲೆಯಲ್ಲಿ ಕೆಇಎ ಸ್ಪಾಟ್ ರ್‍ಯಾಂಕಿಂಗ್‌ ವ್ಯವಸ್ಥೆಯನ್ನು ಅಳವಡಿಸಿಕೊಂಡಿತ್ತು. ಅದರ ಆಧಾರದ ಮೇಲೆ ಗಂಗಾಧರ ಮುತ್ತಗಿ ವೆಟರ್ನರಿ ಸೈನ್ಸ್‌ನಲ್ಲಿ 0.5 ರ್‍ಯಾಂಕ್‌ ಹಾಗೂ ಬಿಎಸ್‌ಸಿ ಅಗ್ರಿಯಲ್ಲಿ 3.5 ರ್‍ಯಾಂಕ್‌ ಗಳಿಸಿ ವಿಶಿಷ್ಟ ಸಾಧನೆ ಮಾಡಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಗಂಗಾಧರ ಮುತ್ತಗಿ, ದ್ವಿತೀಯ ಪಿಯುಸಿ ಅಂಕ ಪಟ್ಟಿ ಸಲ್ಲಿಕೆ ಮಾಡಿರಲಿಲ್ಲ. ಫಲಿತಾಂಶ ಪ್ರಕಟವಾದ ಬಳಿಕ ತಡವಾಗಿ ಅಂಕಪಟ್ಟಿ ಸಲ್ಲಿಕೆ ಹಿನ್ನೆಲೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿದ್ಯಾರ್ಥಿಗೆ ಅನ್ಯಾಯವಾಗದಂತೆ ಸ್ಪಾಟ್ ರ್‍ಯಾಂಕ್‌ ನೀಡಿದೆ. ಮೊದಲ ಸ್ಥಾನ ಪಡೆದ ವಿದ್ಯಾರ್ಥಿಕ್ಕಿಂತ ಹೆಚ್ಚು ಅಂಕ ಬಂದ ಹಿನ್ನೆಲೆ ಟಾಪ್ 1ಕ್ಕಿಂತ ದೊಡ್ಡ ರ್ಯಾಂಕ್ ನೀಡಲಾಗಿದೆ.

ಇನ್ನು ಈ ಬಗ್ಗೆ ಟಿವಿ9 ಜತ ಗಂಗಾಧರ ಮಾತನಾಡಿದ್ದು, ನನಗೆ ಸ್ಪಾಟ್ ರ್‍ಯಾಂಕ್‌ ಬಂದಿದ್ದು ಖುಷಿಯಾಗಿದ್ದು, ಇದಕ್ಕೆ ಇದಕ್ಕೆ ಕಾರಣ ನನ್ನ ತಂದೆ-ತಾಯಿ.ನನ್ನ ತಂದೆ ನಿತ್ಯವೂ ದುಡಿಯಲು ಹೋಗುತ್ತಾರೆ. ನಾವು ತೀರಾನೇ ಬಡ ಕುಟುಂಬದವರು. ತಂದೆಯವರ ದುಡಿಮೆಯಿಂದಲೇ ಮನೆ ನಡೆಯಬೇಕು. ಈ ಸಾಧನೆಗೆ ಅವರೇ ಕಾರಣ. ನನ್ನ ಉಪನ್ಯಾಸಕರು ಕೂಡ ಚೆನ್ನಾಗಿ ಕಲಿಸಿದ್ದಾರೆ. ಸೆರಿಕಲ್ಚರ್ ಹಾಗೂ ಅಗ್ರಿಯಲ್ಲಿ 3.5 ಸ್ಪಾಟ್ ರ್‍ಯಾಂಕ್‌ ಬಂದಿದೆ. ಕೊಂಚ ತಾಂತ್ರಿಕ ಕಾರಣದಿಂದ ಫಲಿತಾಂಶ ಬಂದಿರಲಿಲ್ಲ ಇದೀಗ ಸ್ಪಾಟ್ ರ್‍ಯಾಂಕ್‌ ನೀಡಿದ್ದಾರೆ. ನಾನು ಮುಂದೆ ವೈದ್ಯನಾಗುತ್ತೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ.

Loading...
Unable to load recommendations.
Follow Us