ನಕ್ಸಲ್ ನೇತ್ರಾವತಿ ದಳದ ಮುಖಂಡ ವಿಕ್ರಂಗೌಡ ಎಎನ್ಎಫ್ ಮತ್ತು ಪೊಲೀಸ್ ಎನ್ಕೌಂಟರ್ನಲ್ಲಿ ಬಲಿ
ಕಳೆದ ಒಂದು ವಾರದಿಂದ ನಕ್ಸಲರ ಸದ್ದು ರಾಜ್ಯದಲ್ಲಿ ಕೇಳಿಬರುತ್ತಿದೆ. ಅಸಲಿಗೆ ನಕ್ಸಲ್ ಚಟುವಟಿಕೆಗಳು ನಿಂತು ಹೋಗಿವೆ ಮತ್ತು ಅವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನಗಳು ಸಫಲವಾಗಿವೆ ಎಂದು ಭಾವಿಸಲಾಗಿತ್ತು. ರಾಜ್ಯದ ಗೃಹ ಸಚಿವ ಜಿ ಪರಮೇಶ್ವರ್ ನಕ್ಸಲ್ ಚಟುವಟಿಕೆಗಳನ್ನು ಕೊನೆಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಉಡುಪಿ: ರಾಜ್ಯದಲ್ಲಿ ಕಳೆದ ಕೆಲ ವರ್ಷಗಳಿಂದ ನಕ್ಸಲರ ಹಾವಳಿ ಕಡಿಮೆಯಾಗಿತ್ತು ಅಥವಾ ಇಲ್ಲವಾಗಿತ್ತು ಅನ್ನೋದು ಸುಳ್ಳಲ್ಲ, ಅದರೆ ಅವರು ಮತ್ತೇ ತಲೆ ಎತ್ತಿರುವುದು ಸಹ ಅಷ್ಟೇ ಸತ್ಯ. ಜಿಲ್ಲೆಯ ಉಡುಪಿ ತಾಲ್ಲೂಕು ಕಬ್ಬಿನಾಲೆಯ ಪೀತೆಬೈಲ್ ಅರಣ್ಯ ಪ್ರದೇಶದಲ್ಲಿ ನಕ್ಸಲರು ಸಕ್ರಿಯರಾಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕೂಂಬಿಂಗ್ ಆಪರೇಶನ್ ನಡೆಸಿದ ಎಎನ್ಎಫ್ ಮತ್ತು ಹೆಬ್ರಿ ಪೊಲೀಸರು ನೇತ್ರಾವತಿ ದಳದ ಮುಖಂಡ ವಿಕ್ರಂಗೌಡನನ್ನು ಎನ್ಕೌಂಟರ್ನಲ್ಲಿ ಸಾಯಿಸಿದ್ದಾರೆ. ನಮ್ಮ ಉಡುಪಿ ವರದಿಗಾರ ನೀಡುವ ಮಾಹಿತಿ ಪ್ರಕಾರ ವಿಕ್ರಂಗೌಡನೊಂದಿಗಿದ್ದ ಇತರ ಮೂವರು ಪರಾರಿಯಾಗಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಕ್ಸಲ್ ಎನ್ಕೌಂಟರ್: ಕರ್ನಾಟಕ, ಕೇರಳ, ತಮಿಳುನಾಡು ಪೊಲೀಸರಿಗೆ ಬೇಕಾಗಿದ್ದ ವಿಕ್ರಂ ಗೌಡ ಹಿನ್ನೆಲೆ ಇಲ್ಲಿದೆ
Latest Videos