Kichch Sudeep: ಮೈದಾನದಲ್ಲಿ ಕಿಚ್ಚ ಸುದೀಪ್ ಕೀಪಿಂಗ್ ನೋಡಿ ಫ್ಯಾನ್ಸ್ ಫಿದಾ

Edited By:

Updated on: Jun 19, 2022 | 3:15 PM

ಬೆಂಗಳೂರಿನ ಬಿಜಿಎಸ್​ ಮೈದಾನದಲ್ಲಿ ಪೊಲೀಸ್ ತಂಡದ ಜೊತೆ ಕಿಚ್ಚ ಅವರು ಸ್ನೇಹಪೂರ್ವಕ ಕ್ರಿಕೆಟ್ ಪಂದ್ಯ ಆಡಿದರು. ನಿರ್ದೇಶಕ ನಂದಕಿಶೋರ್, ನಿರ್ಮಾಪಕ ಕೆ.ಪಿ. ಶ್ರೀಕಾಂತ್, ನಟ ಜೆಕೆ, ರಾಜೀವ್, ಬಿಗ್ ಬಾಸ್ ಮಂಜು ಸೇರಿದಂತೆ ಹಲವು ಕಲಾವಿದರು ಈ ಪಂದ್ಯದಲ್ಲಿ ಭಾಗಿಯಾಗಿದ್ದಾರೆ.

ನಟ ಕಿಚ್ಚ ಸುದೀಪ್ (Kichcha Sudeep) ಅವರಿಗೆ ಕ್ರಿಕೆಟ್ ಬಗ್ಗೆ ವಿಶೇಷ ಒಲವು ಇದೆ. ಅವರು ಐಪಿಎಲ್ ಸಂದರ್ಭದಲ್ಲಿ ಮ್ಯಾಚ್ ನೋಡೋಕೆ ಮೈದಾನಕ್ಕೆ ಬರುತ್ತಾರೆ. ಅಷ್ಟೇ ಅಲ್ಲ, ಅವರು ಅನೇಕ ಬಾರಿ ಕ್ರಿಕೆಟ್ ಆಡಿದ ಉದಾಹರಣೆ ಇದೆ. ಇಂದು (ಜೂನ್ 19) ಸುದೀಪ್ ಕ್ರಿಕೆಟ್ ಆಡಲು ಮೈದಾನಕ್ಕೆ ಇಳಿದಿದ್ದಾರೆ. ಬೆಂಗಳೂರಿನ ಬಿಜಿಎಸ್​ ಮೈದಾನದಲ್ಲಿ ಪೊಲೀಸ್ ತಂಡದ ಜೊತೆ ಕಿಚ್ಚ ಅವರು ಸ್ನೇಹಪೂರ್ವಕ ಕ್ರಿಕೆಟ್ ಪಂದ್ಯ ಆಡಿದರು. ನಿರ್ದೇಶಕ ನಂದಕಿಶೋರ್, ನಿರ್ಮಾಪಕ ಕೆ.ಪಿ. ಶ್ರೀಕಾಂತ್, ನಟ ಜೆಕೆ, ರಾಜೀವ್, ಬಿಗ್ ಬಾಸ್ ಮಂಜು ಸೇರಿದಂತೆ ಹಲವು ಕಲಾವಿದರು ಈ ಪಂದ್ಯದಲ್ಲಿ ಭಾಗಿಯಾಗಿದ್ದಾರೆ. ಕಿಚ್ಚ ಸುದೀಪ್ ಅವರು ಕೀಪಿಂಗ್ ಮಾಡಿದ್ದಾರೆ. ಕ್ಯಾಚ್ ಹಿಡಿದು ಫ್ಯಾನ್ಸ್ ಮನಸ್ಸನ್ನು ಗೆದ್ದಿದ್ದಾರೆ.ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ (Vikrant Rona Movie) ರಿಲೀಸ್​ಗೆ ರೆಡಿ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

Loading...
Unable to load recommendations.
Follow Us
TV9 Web

TV9 Kannada

Read More