Kichcha Sudeep: ವೇದಿಕೆಯಲ್ಲಿ ಪತ್ನಿಗೆ ಕಿಚ್ಚ ಸುದೀಪ್ ಹೊಗಳಿಕೆ; ನಾಚಿ ನೀರಾದ ಪ್ರಿಯಾ
Priya Sudeep: ಪ್ರಿಯಾ ಸುದೀಪ್ ಅವರ ವಿಶೇಷ ಗುಣಗಳ ಬಗ್ಗೆ ಕಿಚ್ಚ ಮೆಚ್ಚುಗೆಯ ಮಾತುಗಳನ್ನು ಹೇಳಿದ್ದಾರೆ. ಅದನ್ನು ಕೇಳಿಸಿಕೊಂಡು ಪ್ರಿಯಾ ನಾಚಿ ನೀರಾಗಿದ್ದಾರೆ.
ನಟ ಕಿಚ್ಚ ಸುದೀಪ್ (Kichcha Sudeep) ಅವರ ಸಿನಿಮಾ ಜರ್ನಿಗೆ ಕುಟುಂಬದ ಸದಸ್ಯರು ಬೆಂಬಲವಾಗಿ ನಿಂತಿದ್ದಾರೆ. ಇಂದು (ಜುಲೈ 17) ‘ವಿಕ್ರಾಂತ್ ರೋಣ’ ಚಿತ್ರತಂಡದಿಂದ ‘ಕಿಚ್ಚ ವರ್ಸ್’ ಲಾಂಚ್ ಮಾಡಲಾಯಿತು. ಎನ್ಎಫ್ಟಿ ಕುರಿತ ಈ ಸುದ್ದಿಗೋಷ್ಠಿಯಲ್ಲಿ ಕಿಚ್ಚನ ಪತ್ನಿ ಪ್ರಿಯಾ ಸುದೀಪ್ (Priya Sudeep) ಕೂಡ ಭಾಗಿ ಆಗಿದ್ದರು. ಅವರ ಬಗ್ಗೆ ಸುದೀಪ್ ಮೆಚ್ಚುಗೆ ಮಾತುಗಳನ್ನು ಆಡಿದರು. ಅದನ್ನು ಕೇಳಿಸಿಕೊಂಡು ಪ್ರಿಯಾ ನಾಚಿ ನೀರಾದರು. ಆ ಸುಂದರ ಕ್ಷಣಗಳು ಕ್ಯಾಮೆರಾ ಕಣ್ಣನಲ್ಲಿ ಸೆರೆ ಆಗಿವೆ. ಜುಲೈ 28ಕ್ಕೆ ‘ವಿಕ್ರಾಂತ್ ರೋಣ’ (Vikrant Rona) ಚಿತ್ರ ಬಿಡುಗಡೆ ಆಗಲಿದೆ. ಇಡೀ ಚಿತ್ರತಂಡ ಭರದಿಂದ ಪ್ರಚಾರ ಮಾಡುತ್ತಿದೆ.
Published on: Jul 17, 2022 07:26 PM