ಡಿಸಿ, ತಹಶೀಲ್ದಾರ್ ಡೋಂಟ್ ಕೇರ್: ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಕೋಳಿಫಾರಂ ದುವಾರ್ಸನೆಯಿಂದ ಬೇಸತ್ತು ಕೋಳಿ, ಮೊಟ್ಟೆಗಳನ್ನು ಕದ್ದೊಯ್ದಿರುವ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಉಣಚಗೇರಿ ಗ್ರಾಮದಲ್ಲಿ ನಡೆದಿದೆ. ಕೋಳಿಫಾರಂನಿಂದ ಬರುತ್ತಿದ್ದ ದುವಾರ್ಸನೆಯಿಂದ ಉಣಚಗೇರಿ ಗ್ರಾಮಸ್ಥರು ರೋಸಿ ಹೋಗಿದ್ದರು. ಹೀಗಾಗಿ ಗ್ರಾಮದಿಂದ ಕೋಳಿಫಾರಂ ತೆರವುಗೊಳಿಸುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ಗೆ ಮನವಿ ಮಾಡಿದ್ದಾರೆ. ಆದ್ರೆ, ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಜನರು ತಾಳ್ಮೆಯ ಕಟ್ಟೆ ಹೊಡೆದಿದ್ದು, ಗ್ರಾಮಸ್ಥರೇ ಕೋಳಿಫಾರಂಗೆ ನುಗ್ಗಿ ಕೋಳಿ, ಮೊಟ್ಟೆ ಕದ್ದುಕೊಂಡು ಹೋಗಿದ್ದಾರೆ. ಇದರಿಂದ ಮಾಲೀಕ ಕಂಗಾಲಾಗಿದ್ದಾನೆ.
Published on: Dec 25, 2025 09:27 PM
