‘ಜಿಂಕೆ ರೊಚ್ಚಿಗೆದ್ದರೆ ಆಗೋದು ಸಿಂಹನೇ’; ವಿನಯ್, ಅವಿನಾಶ್ನಿಂದ ರಣರಂಗವಾಯಿತು ಬಣ್ಣದಾಟ
ಅವಿನಾಶ್ ಹಾಗೂ ವಿನಯ್ ಮಧ್ಯೆ ಕಿತ್ತಾಟ ನಡೆದಿದೆ. ಕೈಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಈ ಆಟ ಹೋಗಿದೆ. ವಿನಯ್ ನಡೆಯನ್ನು ನೋಡಿ ಅವರ ತಂಡದವರೇ ಅಸಮಧಾನ ಹೊರಹಾಕಿದ್ದಾರೆ.
ವಿನಯ್ ಗೌಡ ಅವರು ಬಿಗ್ ಬಾಸ್ (Bigg Boss) ಮನೆಯಲ್ಲಿ ಸ್ಟ್ರಾಂಗ್ ಸ್ಪರ್ಧಿ ಆಗಿದ್ದಾರೆ. ಆದರೆ, ಅವರು ಸಿಟ್ಟಾದಾಗ ಯಾರಿಂದಲೂ ತಡೆಯೋಕೆ ಸಾಧ್ಯವಿಲ್ಲ. ಈಗ ಆಗಿದ್ದೂ ಅದೇ. ಬಿಗ್ ಬಾಸ್ ಮನೆಯಲ್ಲಿ ಬಣ್ಣದ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ ಆಡುವಾಗ ಅವಿನಾಶ್ ಹಾಗೂ ವಿನಯ್ ಮಧ್ಯೆ ಕಿತ್ತಾಟ ನಡೆದಿದೆ. ಕೈಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಈ ಆಟ ಹೋಗಿದೆ. ವಿನಯ್ ನಡೆಯನ್ನು ನೋಡಿ ಅವರ ತಂಡದವರೇ ಅಸಮಧಾನ ಹೊರಹಾಕಿದ್ದಾರೆ. ಈ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. ಇಂದು (ಡಿಸೆಂಬರ್ 20) ರಾತ್ರಿ ಎಪಿಸೋಡ್ ಪ್ರಸಾರ ಆಗಲಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ