‘ರೀಲ್ಸ್ ಕೇಸ್.. ಹಹಹ’; ನಗುತ್ತಲೇ ಜೈಲಿನಿಂದ ಹೊರ ಬಂದ ವಿನಯ್-ರಜತ್
ಮಚ್ಚು ಹಿಡುದ ರೀಲ್ಸ್ ಮಾಡಿ ರಜತ್ ಹಾಗೂ ವಿನಯ್ ಜೈಲು ಸೇರಿದ್ದರು. ಈಗ ಇವರಿಗೆ ನ್ಯಾಯಾಲಯದಲ್ಲಿ ಜಾಮೀನು ಸಿಕ್ಕಿದೆ. ಈ ಬೆನ್ನಲ್ಲೇ ಅವರು ಜೈಲಿನಿಂದ ಹೊರ ಬಂದಿದ್ದಾರೆ. ವಿನಯ್ ಗೌಡ ಅವರು ಎಲ್ಲವನ್ನೂ ಮಾತನಾಡೋಣ ಎನ್ನುತ್ತಲೇ ಜೈಲಿನಿಂದ ಹೊರ ಹೋದರು .
ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣದಲ್ಲಿ ಬಿಗ್ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಹಾಗೂ ವಿನಯ್ ಗೌಡ ಜೈಲು ಸೇರಿದ್ದರು. ಈಗ ನ್ಯಾಯಾಲಯ ಅವರಿಗೆ ಜಾಮೀನು ನೀಡಿದೆ. ಈ ಬೆನ್ನಲ್ಲೇ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ರಜತ್, ವಿನಯ್ (Vinay Gowda) ರಿಲೀಸ್ ಆಗಿದ್ದಾರೆ. ಕೋರ್ಟ್ ನಿನ್ನೆ (ಮಾರ್ಚ್ 28) ಮಧ್ಯಾಹ್ನವೇ ಇಬ್ಬರಿಗೂ ಜಾಮೀನು ನಿಡಿತ್ತು. ಆದರೆ, ಕೋರ್ಟ್ನಿಂದ ಆದೇಶ ಪ್ರತಿ ತಡವಾಗಿ ಜೈಲು ಅಧಿಕಾರಿಗಳ ಕೈ ಸೇರಿದ್ದರಿಂದ ಇವರು ಒಂದು ದಿನ ಹೆಚ್ಚುವರಿಯಾಗಿ ಜೈಲಿನಲ್ಲಿ ಕಳೆಯುವಂತೆ ಆಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.