ಬಿಗ್​ ಬಾಸ್​ ಮನೆಯ ವಸ್ತುಗಳು ಚೆಲ್ಲಾಪಿಲ್ಲಿ; ಏನೂ ಮಾಡಲಾಗದೇ ಅಸಹಾಯಕ ಸ್ಥಿತಿಗೆ ತಲುಪಿದ ವಿನಯ್​

Updated on: Dec 05, 2023 | 3:09 PM

ಮೊದಲೆಲ್ಲ ಬೇರೆಯವರ ತಪ್ಪು ಕಂಡಾಗ ಕೂಗಾಡುತ್ತಿದ್ದ ವಿನಯ್​ ಗೌಡ ಅವರು ಈಗ ಸುಮ್ಮನಾಗಿದ್ದಾರೆ. ಇಡೀ ಬಿಗ್​ ಬಾಸ್​ ಮನೆಯ ವಸ್ತುಗಳು ಚೆಲ್ಲಾಪಿಲ್ಲಿ ಆಗಿವೆ. ಹಾಗಿದ್ದರೂ ಕೂಡ ವಿನಯ್​ ಗೌಡ ಕೈ ಕಟ್ಟಿ ಸುಮ್ಮನೆ ನೋಡಬೇಕಾದ ಪರಿಸ್ಥಿತಿ ಬಂದಿದೆ. ಅದಕ್ಕೆ ಸಾಕ್ಷಿ ಒದಗಿಸುವ ಪ್ರೋಮೋ ಇಲ್ಲಿದೆ..

‘ಬಿಗ್ ಬಾಸ್​ ಕನ್ನಡ ಸೀಸನ್​ 10’ (Bigg Boss Kannada) ಶೋನಲ್ಲಿ ಹೊಸ ಟಾಸ್ಕ್​ ನೀಡಲಾಗಿದೆ. ರಾಕ್ಷಸರು ಮತ್ತು ಗಂಧರ್ವರು ಎಂದು ಎರಡು ಗುಂಪು ಮಾಡಲಾಗಿದೆ. ರಾಕ್ಷಸರು ಮಾಡಿದ ಎಲ್ಲ ಕೆಡುಕುಗಳನ್ನು ಗಂಧರ್ವರು ಸಹಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ವಿನಯ್​ ಗೌಡ (Vinay Gowda) ಅವರು ಗಂಧರ್ವರ ಟೀಮ್​ನಲ್ಲಿ ಇದ್ದಾರೆ. ರಾಕ್ಷಸರ ಟೀಮ್​ನಲ್ಲಿ ಇರುವ ಕಾರ್ತಿಕ್​ ಮಹೇಶ್ (Karthik Mahesh)​, ಸಂಗೀತಾ ಶೃಂಗೇರಿ ಮುಂತಾದವರು ಮಾಡಿದ ಕಿರಿಕ್​ಗಳನ್ನು ವಿನಯ್​ ಗೌಡ ಮುಂತಾದವರು ಸಹಿಸಿಕೊಳ್ಳಬೇಕಾಗಿದೆ. ಏನೂ ಮಾಡಲಾಗದ ಅಸಹಾಯಕ ಸ್ಥಿತಿಗೆ ಅವರು ತಲುಪಿದ್ದಾರೆ. ಈ ಸಂಚಿಕೆ ಡಿಸೆಂಬರ್​ 5ರಂದು ರಾತ್ರಿ 9.30ಕ್ಕೆ ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ಬಿತ್ತರ ಆಗಲಿದೆ. ಜಿಯೋ ಸಿನಿಮಾದಲ್ಲಿ ದಿನದ 24 ಗಂಟೆಯೂ ಬಿಗ್ ಬಾಸ್ ಲೈವ್​ ನೋಡಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More