ಬಿಗ್​ ಬಾಸ್​ನಲ್ಲಿ ಮೂರನೇ ವಾರದ ಎಲಿಮಿನೇಷನ್​​ನಿಂದ ಸೇಫ್​ ಆದ ವಿನಯ್​ ಗೌಡ

Updated on: Oct 25, 2023 | 1:08 PM

ರಫ್​ ಆ್ಯಂಡ್​ ಟಫ್​ ಸ್ವಭಾವದ ಕಾರಣಕ್ಕೆ ವಿನಯ್​ ಗೌಡ ಅವರು ದೊಡ್ಮನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಕೆಲವರಿಂದ ಅವರು ಟೀಕೆ ಎದುರಿಸಿದ್ದಾರೆ. ಅವರು ಸ್ಮೋಕಿಂಗ್​ ರೂಮ್​ ನಿಯಮವನ್ನು ಉಲ್ಲಂಘಿಸಿದ ಕಾರಣಕ್ಕೆ ಮನೆಮಂದಿಯೆಲ್ಲ ಶಿಕ್ಷೆ ಅನುಭವಿಸುವಂತೆ ಆಗಿತ್ತು. ಆದರೂ ಅವರು 3ನೇ ವಾರದ ಎಲಿಮಿನೇಷನ್​ನಿಂದ ಬಚಾವ್​ ಆಗಿದ್ದು ಅಚ್ಚರಿ ಮೂಡಿಸಿದೆ.

ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada Season 10) ರಿಯಾಲಿಟಿ ಶೋ ಈಗ ಮೂರನೇ ವಾರಕ್ಕೆ ಕಾಲಿಟ್ಟಿದೆ. ಈ ವಾರ ಯಾರು ಎಲಿಮಿನೇಟ್​ ಆಗುತ್ತಾರೆ ಎಂಬ ಕೌತುಕ ಮೂಡಿದೆ. 3ನೇ ವಾರದ ಎಲಿಮಿನೇಷನ್​ಗೆ (Bigg Boss Elimination) ವಿನಯ್​ ಗೌಡ, ಭಾಗ್ಯಶ್ರೀ, ಡ್ರೋನ್​ ಪ್ರತಾಪ್​, ಕಾರ್ತಿಕ್​ ಮಹೇಶ್​, ತನಿಶಾ ಕುಪ್ಪಂಡ, ಮೈಕೆಲ್​ ಅಜಯ್​, ಸ್ನೇಹಿತ್​ ಮತ್ತು ಈಶಾನಿ ಅವರು ನಾಮಿನೇಟ್​ ಆಗಿದ್ದರು. ಆದರೆ ಈಗ ವಿನಯ್​ ಗೌಡ ಅವರಿಗೆ ಮನೆಮಂದಿಯೆಲ್ಲ ವೋಟ್​ ನೀಡಿ ಬಚಾವ್​ ಮಾಡಿದ್ದಾರೆ.. ಹಾಗಾಗಿ ವಿನಯ್​ ಗೌಡ (Vinay Gowda) ಅವರು ಈ ವಾರ ಎಲಿಮಿನೇಟ್​ ಆಗುವುದಿಲ್ಲ. ತಮ್ಮ ರಫ್​ ಆ್ಯಂಡ್​ ಟಫ್​ ಸ್ವಭಾವದ ಕಾರಣಕ್ಕೆ ಅವರು ದೊಡ್ಮನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಕೆಲವರಿಂದ ಅವರು ಟೀಕೆ ಎದುರಿಸಿದ್ದಾರೆ. ಅವರು ಸ್ಮೋಕಿಂಗ್​ ರೂಮ್​ ನಿಯಮವನ್ನು ಉಲ್ಲಂಘಿಸಿದ ಕಾರಣಕ್ಕೆ ಮನೆಮಂದಿಯೆಲ್ಲ ಶಿಕ್ಷೆ ಅನುಭವಿಸುವಂತೆ ಆಗಿತ್ತು. ಆದರೂ ಕೂಡ ಅವರು 3ನೇ ವಾರದ ಎಲಿಮಿನೇಷನ್​ನಿಂದ ಬಚಾವ್​ ಆಗಿದ್ದು ಅಚ್ಚರಿ ಮೂಡಿಸಿದೆ. ‘ಜಿಯೋ ಸಿನಿಮಾ’ ಮೂಲಕ ಬಿಗ್​ ಬಾಸ್​ ಶೋ 24 ಗಂಟೆಯೂ ಉಚಿತವಾಗಿ ವೀಕ್ಷಣೆಗೆ ಲಭ್ಯವಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More