‘ಒಂದು ಸರಳ ಪ್ರೇಮಕಥೆ’ಗಾಗಿ ಬೆಂಗಳೂರಿನಿಂದ ಮೈಸೂರಿಗೆ ರ್ಯಾಲಿ

|

Updated on: Feb 06, 2024 | 11:03 PM

Vinay Rajkumar: ದೊಡ್ಮನೆ ಕುಡಿ ವಿನಯ್ ರಾಜ್​ಕುಮಾರ್ ನಟಿಸಿ ಸಿಂಪಲ್ ಸುನಿ ನಿರ್ದೇಶನ ಮಾಡಿರುವ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.

ದೊಡ್ಮನೆ ಕುಡಿ ವಿನಯ್ ರಾಜ್​ಕುಮಾರ್ (Vinay Rajkumar) ನಟನೆಯ ‘ಒಂದು ಸರಳ ಪ್ರೇಮಕಥೆ’ (Ondu Sarala Premakathe) ಸಿನಿಮಾ ಫೆಬ್ರವರಿ 8ಕ್ಕೆ ಬಿಡುಗಡೆ ಆಗಲಿದೆ. ಮಲ್ಟಿಪ್ಲೆಕ್ಸ್​ಗಳಲ್ಲಿ ಫೆಬ್ರವರಿ 8ಕ್ಕೆ ಹಾಗೂ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಫೆಬ್ರವರಿ 9ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ಚಿತ್ರತಂಡ ತೊಡಗಿಸಿಕೊಂಡಿದೆ. ಚಿತ್ರತಂಡ ಬೆಂಗಳೂರಿನಿಂದ ಮೈಸೂರಿಗೆ ರ್ಯಾಲಿ ಮಾಡುತ್ತಿದ್ದು, ರಸ್ತೆ ಮಧ್ಯೆ ಸಿಗುವ ಮುಖ್ಯವಾದ ನಗರ-ಪಟ್ಟಣಗಳಲ್ಲಿ ಸಿನಿಮಾದ ಕುರಿತು ಪ್ರಚಾರ ಮಾಡಲಿದ್ದಾರೆ. ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಇನ್ನೂ ಹಲವು ಕಡೆ ಈಗಾಗಲೇ ಪ್ರಚಾರ ಮಾಡಿದೆ ಚಿತ್ರತಂಡ. ಸಿನಿಮಾವನ್ನು ಸಿಂಪಲ್ ಸುನಿ ನಿರ್ದೇಶನ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ