Gramayana: ಮತ್ತೆ ಶುರುವಾಯ್ತು ವಿನಯ್ ರಾಜ್​ಕುಮಾರ್ ಗ್ರಾಮಾಯಣ: ಈ ಬಾರಿ ಯಾರು ನಿರ್ಮಾಪಕರು

Vinay Rajkumar: ವಿನಯ್ ರಾಜ್​ಕುಮಾರ್ ನಟಸುತ್ತಿದ್ದ ಗ್ರಾಮಾಯಣ ಸಿನಿಮಾ ಈಗ ಮತ್ತೆ ಪ್ರಾರಂಭವಾಗುತ್ತಿದೆ. ನಿರ್ಮಾಪಕರು ಬದಲಾಗಿದ್ದು ಬಹು ಅದ್ಧೂರಿಯಾಗಿ ಸಿನಿಮಾಕ್ಕೆ ಮರು ಆರಂಭ ನೀಡುತ್ತಿದ್ದಾರೆ.

Gramayana: ಮತ್ತೆ ಶುರುವಾಯ್ತು ವಿನಯ್ ರಾಜ್​ಕುಮಾರ್ ಗ್ರಾಮಾಯಣ: ಈ ಬಾರಿ ಯಾರು ನಿರ್ಮಾಪಕರು
ಗ್ರಾಮಾಯಣ
Follow us
ಮಂಜುನಾಥ ಸಿ.
| Updated By: Digi Tech Desk

Updated on:Jun 07, 2023 | 11:07 AM

ವಿನಯ್ ರಾಜ್​ಕುಮಾರ್ (Vinay Rajkumar) ನಟನೆಯ ಗ್ರಾಮಾಯಣ (Gramayana) ಸಿನಿಮಾದ ಮುಹೂರ್ತ ಜೂನ್ 8 ರಂದು ನಡೆಯಲಿದೆ. ಇದೇನಿದು ಗ್ರಾಮಾಯಣ ಸಿನಿಮಾದ ಮುಹೂರ್ತ ಈಗ ನಡೆಯುತ್ತಿದೆಯೇ? ಈ ಸಿನಿಮಾ ಶುರುವಾಗಿ ಚಿತ್ರೀಕರಣವೂ ಮುಗಿದಿರಬೇಕಲ್ಲವೆ ಎಂಬ ಅನುಮಾನ ಸಹಜ. ಗ್ರಾಮಾಯಣ ಸಿನಿಮಾದ ಮುಹೂರ್ತ ನಾಲ್ಕು ವರ್ಷದ ಹಿಂದೆಯೇ ನಡೆದಿತ್ತು. ಕೋವಿಡ್ ಗೂ ಮುನ್ನ ಸಿನಿಮಾದ ಚಿತ್ರೀಕರಣ ಸಹ ಕೆಲವು ದಿನಗಳ ಕಾಲ ನಡೆದು ಒಂದು ಪ್ರೋಮೋ ಸಹ ಬಿಡುಗಡೆ ಆಗಿತ್ತು. ಆದರೆ ಆ ಬಳಿಕ ಸಿನಿಮಾ ನಿಂತುಹೋಗಿತ್ತು. ಈಗ ಮತ್ತೆ ಸಿನಿಮಾಕ್ಕೆ ಚಾಲನೆ ಸಿಗುತ್ತದೆ. ಗ್ರಾಮಾಯಣ ಸಿನಿಮಾಕ್ಕೆ ಈಗ ಮತ್ತೊಮ್ಮೆ ಚಾಲನೆ ದೊರೆಯುತ್ತಿದ್ದು ಈಗ ಬೇರೆ ನಿರ್ಮಾಪಕರು ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ನಿಂತು ಹೋಗಿದ್ದ ಸಿನಿಮಾಕ್ಕೆ ನಿರ್ದೇಶಕ ಕೆಪಿ ಶ್ರೀಕಾಂತ್ ಹಾಗೂ ಲಹರಿ ಫಿಲಮ್ಸ್​ನ ಮನೋಹರ್ ಅವರುಗಳು ಜಂಟಿಯಾಗಿ ಈ ಸಿನಿಮಾಕ್ಕೆ ಕೈ ಹಾಕಿದ್ದು ಸಿನಿಮಾಕ್ಕೆ ಮತ್ತೊಮ್ಮೆ ಮುಹೂರ್ತ ಮಾಡಿ ಹೊಸದಾಗಿ ಚಿತ್ರೀಕರಣ ಶುರು ಮಾಡುತ್ತಿದ್ದಾರೆ. ಈ ಹಿಂದೆ ಗ್ರಾಮಾಯಣ ಸಿನಿಮಾಕ್ಕೆ ಇದ್ದ ತಾಂತ್ರಿಕ ವರ್ಗವೇ ಈ ಬಾರಿಯೂ ಮುಂದುವರೆಯಲಿದೆ ಎನ್ನಲಾಗುತ್ತಿದೆ.

ಗ್ರಾಮಾಯಣ ಸಿನಿಮಾಕ್ಕೆ ಅದ್ಧೂರಿಯಾಗಿ ಮುಹೂರ್ತವನ್ನು ನಿರ್ಮಾಪಕರು ಮಾಡುತ್ತಿದ್ದಾರೆ. ಜೂನ್ 8 ರಂದು ಬಂಡೆ ಮಕಾಳಮ್ಮ ದೇವಾಲಯದಲ್ಲಿ ಸಿನಿಮಾದ ಮುಹೂರ್ತ ನಡೆಯಲಿದ್ದು ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಡಿಕೆ ಶಿವಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್​ಕುಮಾರ್, ದುನಿಯಾ ವಿಜಯ್, ಡಾಲಿ ಧನಂಜಯ್, ಉಪೇಂದ್ರ, ರಾಜ್ ಬಿ ಶೆಟ್ಟಿ, ವಿಜಯ್ ರಾಘವೇಂದ್ರ, ಶ್ರೀಮುರಳಿ, ಧ್ರುವ ಸರ್ಜಾ ಅವರುಗಳು ಭಾಗಿಯಾಗಲಿದ್ದಾರೆ. ಜೊತೆಗೆ ಅಶ್ವಿನಿ ಪುನೀತ್ ರಾಜ್​ಕುಮಾರ್ ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಕೆ.ಪಿ.ಶ್ರೀಕಾಂತ್ ಹಾಗೂ ಮನೋಹರ್ ನಾಯ್ಡು ಅವರುಗಳು ಜಂಟಿಯಾಗಿ ಈಗಾಗಲೇ ಉಪೇಂದ್ರ ನಟನೆಯ ಯುಐ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಇದೀಗ ಇವರಿಬ್ಬರೂ ಜಂಟಿಯಾಗಿ ಗ್ರಾಮಾಯಣ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಈ ಹಿಂದೆ ಚಿತ್ರೀಕರಣ ಮಾಡಿದ್ದ ದೃಶ್ಯಗಳನ್ನು ಉಳಿಸಿಕೊಳ್ಳುತ್ತಾರೆಯೇ ಅಥವಾ ಸಂಪೂರ್ಣವಾಗಿ ಹೊಸದಾಗಿ ಚಿತ್ರೀಕರಣ ಮಾಡಲಿದ್ದಾರೆ ಎಂಬುದು ಮುಹೂರ್ತ ದಿನವೇ ತಿಳಿದು ಬರಲಿದೆ.

ಸಿದ್ಧಾರ್ಥ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟ ವಿನಯ್ ರಾಜ್​ಕುಮಾರ್ ಇತ್ತೀಚೆಗೆ ಭಿನ್ನವಾದ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಪೆಪೆ ಹೆಸರಿನ ಸಿನಿಮಾದಲ್ಲಿ ವಿನಯ್ ರಾಜ್​ಕುಮಾರ್ ನಟಿಸಿದ್ದಾರೆ. ಗ್ರಾಮಾಯಣ ಸಿನಿಮಾ ಸಹ ಭಿನ್ನವಾದ ಕತೆಯನ್ನು ಒಳಗೊಂಡಿತ್ತು. ಒಂದು ಹಳ್ಳಿಯಲ್ಲಿ ನಡೆವ ಘಟನೆಗಳನ್ನು ಗ್ರಾಮಾಯಣ ಸಿನಿಮಾ ಒಳಗೊಂಡಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:49 pm, Tue, 6 June 23

ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಮೈಸೂರು; ಹುಚ್ಚು ಸಾಹಸಗಳನ್ನು ಸೆರೆಹಿಡಿಯಲು ಸಿಸಿಟಿವಿ ಕೆಮೆರಾಗಳು: ಡಿಸಿಪಿ
ಮೈಸೂರು; ಹುಚ್ಚು ಸಾಹಸಗಳನ್ನು ಸೆರೆಹಿಡಿಯಲು ಸಿಸಿಟಿವಿ ಕೆಮೆರಾಗಳು: ಡಿಸಿಪಿ