ಅಪ್ಪು ಹೋದಮೇಲೆ ಏರಿಯಾನಲ್ಲಿ ಗಣೇಶ ಇಡುತ್ತಿಲ್ಲ: ವಿನಯ್ ರಾಜ್​ಕುಮಾರ್

Updated on: Aug 26, 2025 | 7:19 PM

Ganesha Festival: ಸದಾಶಿವನಗರದಲ್ಲಿ ಏರಿಯಾ ಹುಡುಗರು ಗಣೇಶ ಇಡುತ್ತಿದ್ದರಂತೆ. ಆ ಗಣೇಶನಿಗೆ ವಿಶೇಷ ಪೂಜೆ ಮಾಡಿಸಿ ವಿಸರ್ಜನೆ ವೇಳೆ ಪುನೀತ್ ರಾಜ್​ಕುಮಾರ್ ಅವರು ಡ್ಯಾನ್ಸ್ ಮಾಡುತ್ತಿದ್ದರಂತೆ. ಆದರೆ ಅಪ್ಪು ಕಾಲವಾದ ಬಳಿಕ ಏರಿಯಾನಲ್ಲಿ ಗಣೇಶ ಇಡುವುದು ನಿಲ್ಲಿಸಿದ್ದಾರಂತೆ. ಈ ಬಗ್ಗೆ ನಟ ವಿನಯ್ ರಾಜ್​ಕುಮಾರ್ ಟಿವಿ9 ಕನ್ನಡದ ಜೊತೆಗೆ ಮಾತನಾಡಿದ್ದಾರೆ. ಇಲ್ಲಿದೆ ವಿಡಿಯೋ...

ವಿನಯ್ ರಾಜ್​​ಕುಮಾರ್ (Vinay Rajkumar) ನಟನೆಯ ‘ಅಂದೊಂದಿತ್ತು ಕಾಲ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಇದೀಗ ಇಡೀ ಚಿತ್ರತಂಡ ಗೌರಿ-ಗಣೇಶ ಹಬ್ಬ ಆಚರಣೆ ಮಾಡಿದೆ. ಈ ಸಂದರ್ಭದಲ್ಲಿ ಟಿವಿ9 ಜೊತೆಗೆ ಮಾತನಾಡಿದ ವಿನಯ್ ರಾಜ್​ಕುಮಾರ್, ತಮ್ಮ ಕುಟುಂಬಕ್ಕೆ ಗಣೇಶ ಹಬ್ಬದೊಟ್ಟಿಗೆ ಇರುವ ವಿಶೇಷ ನಂಟಿನ ಬಗ್ಗೆ ಮಾತನಾಡಿದರು. ಸದಾಶಿವನಗರದಲ್ಲಿ ಏರಿಯಾ ಹುಡುಗರು ಗಣೇಶ ಇಡುತ್ತಿದ್ದರಂತೆ. ಆ ಗಣೇಶನಿಗೆ ವಿಶೇಷ ಪೂಜೆ ಮಾಡಿಸಿ ವಿಸರ್ಜನೆ ವೇಳೆ ಪುನೀತ್ ರಾಜ್​ಕುಮಾರ್ ಅವರು ಡ್ಯಾನ್ಸ್ ಮಾಡುತ್ತಿದ್ದರಂತೆ. ಆದರೆ ಅಪ್ಪು ಕಾಲವಾದ ಬಳಿಕ ಏರಿಯಾನಲ್ಲಿ ಗಣೇಶ ಇಡುವುದು ನಿಲ್ಲಿಸಿದ್ದಾರಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More