ಸಹೋದರ ಯುವ ಬಗ್ಗೆ ವಿನಯ್ ರಾಜ್​ಕುಮಾರ್ ಪ್ರೀತಿಯ ಮಾತು

ಸಹೋದರ ಯುವ ಬಗ್ಗೆ ವಿನಯ್ ರಾಜ್​ಕುಮಾರ್ ಪ್ರೀತಿಯ ಮಾತು

|

Updated on: Mar 23, 2024 | 11:35 PM

Vinay Rajkumar: ಯುವ ರಾಜ್​ಕುಮಾರ್ ನಟನೆಯ ‘ಯುವ’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಹೊಸಪೇಟೆಯಲ್ಲಿ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಸಹೋದರನ ಬಗ್ಗೆ ವಿನಯ್ ರಾಜ್​ಕುಮಾರ್ ಮಾತನಾಡಿದರು.

ಯುವ ರಾಜ್​ಕುಮಾರ್ (Yuva Rajkumar) ನಟನೆಯ ‘ಯುವ’ ಸಿನಿಮಾ ಮಾರ್ಚ್ 28ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಹೊಸಪೇಟೆಯಲ್ಲಿ ಇಂದು (ಮಾರ್ಚ್ 23) ಅದ್ಧೂರಿಯಾಗಿ ನಡೆದಿದೆ. ಸಿನಿಮಾದ ಪ್ರೀ ರಿಲೀಸ್​ನಲ್ಲಿ ದೊಡ್ಮನೆಯ ಹಲವು ಸದಸ್ಯರು ಭಾಗಿ ಆಗಿದ್ದರು. ‘ಯುವ’ ಸಿನಿಮಾ ಮೂಲಕ ಲಾಂಚ್ ಆಗುತ್ತಿರುವ ಯುವ ರಾಜ್​ಕುಮಾರ್ ಬಗ್ಗೆ ಅವರ ಅಣ್ಣ ವಿನಯ್ ರಾಜ್​ಕುಮಾರ್ ಕೆಲವು ಮಾತುಗಳನ್ನಾಡಿದರು. ಯುವ ರಾಜ್​ಕುಮಾರ್ ಅಲಿಯಾಸ್ ಗುರು ಅವರ ಹೋಲಿಕೆ ಅಣ್ಣಾವ್ರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಿಗಳಂತೆ ಇದೆಯೆಂದರು. ಸಿನಿಮಾ ಬಗ್ಗೆ ಮಾತನಾಡಿ, ಯಾರೇ ಈ ಸಿನಿಮಾ ನೋಡಿದರೂ ಕಣ್ಣೀರು ಹಾಕದೆ ಬರಲಾರರು ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ