ಯುವ ರಾಜ್​ಕುಮಾರ್ ಸಿನಿಮಾ ಬಗ್ಗೆ ಶಿವರಾಜ್ ಕುಮಾರ್ ಮಾತು

ಯುವ ರಾಜ್​ಕುಮಾರ್ ಸಿನಿಮಾ ಬಗ್ಗೆ ಶಿವರಾಜ್ ಕುಮಾರ್ ಮಾತು

ಮಂಜುನಾಥ ಸಿ.
|

Updated on: Mar 13, 2024 | 5:11 PM

Shiva Rajkumar-Yuva: ‘ಯುವ’ ಸಿನಿಮಾ ಮೂಲಕ ಯುವರಾಜ್ ಕುಮಾರ್ ಅವರು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಯುವ ಅವರ ತಯಾರಿ ಬಗ್ಗೆ ಶಿವರಾಜ್ ಕುಮಾರ್ ಮಾತನಾಡಿದ್ದಾರೆ.

ದೊಡ್ಮನೆಯ ಮತ್ತೊಂದು ಕುಡಿ ಚಿತ್ರರಂಗಕ್ಕೆ ಅಡಿ ಇಡಲು ಸಿದ್ಧವಾಗಿದೆ. ಯುವ ರಾಜ್​ಕುಮಾರ್ (Yuva Rajkumar) ಅವರ ಮೊದಲ ಸಿನಿಮಾ ‘ಯುವ’ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಯುವ ಅವರ ಮೊದಲ ಸಿನಿಮಾದ ಬಗ್ಗೆ ದೊಡ್ಮನೆ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆಯಿದೆ. ಚಿತ್ರತಂಡ ಸಹ ಭರ್ಜರಿಯಾಗಿ ಪ್ರಚಾರ ಆರಂಭಿಸಿದೆ. ಶಿವರಾಜ್ ಕುಮಾರ್ ಸಹ ಒಂದು ಪ್ರಮೋಷನ್ ವಿಡಿಯೋನಲ್ಲಿ ಯುವ ಜೊತೆಗೆ ಕಾಣಿಸಿಕೊಂಡಿದ್ದಾರೆ. ಇದೀಗ ‘ಕರಟಕ ದಮನಕ’ ಸಿನಿಮಾದ ಪ್ರಚಾರದಲ್ಲಿ ಪಾಲ್ಗೊಂಡಿರುವ ಶಿವರಾಜ್ ಕುಮಾರ್, ಯುವ ರಾಜ್​ಕುಮಾರ್ ಅವರ ಮೊದಲ ಸಿನಿಮಾ, ಅದಕ್ಕೆ ಅವರು ಮಾಡಿಕೊಂಡಿರುವ ತಯಾರಿ ಬಗ್ಗೆ ಮಾತನಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ