ಕಾವೇರಿ ವಿವಾದ: ಚಿತ್ರರಂಗ ಸುಮ್ಮನೆ ಕೂತಿಲ್ಲ ಎಂದ ವಿನೋದ್ ಪ್ರಭಾಕರ್

Updated on: Sep 20, 2023 | 11:51 PM

Vinod Prabhakar: ಕಾವೇರಿ ವಿವಾದದ ಬಗ್ಗೆ ಚಿತ್ರರಂಗ ಮೌನ ತಳೆದಿದೆ ಎಂದು ಕಾವೇರಿ ಪರ ಹೋರಾಟಗಾರರು ಆರೋಪಿಸಿದ್ದಾರೆ. ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ನಟ ವಿನೋದ್ ಪ್ರಭಾಕರ್, ಕಾವೇರಿ ವಿವಾದದ ಬಗ್ಗೆ ಚಿತ್ರರಂಗ ಸುಮ್ಮನೆ ಕೂತಿಲ್ಲ ಎಂದಿದ್ದಾರೆ.

ಕಾವೇರಿ (Cauvery) ವಿವಾದದ ಬಗ್ಗೆ ಚಿತ್ರರಂಗ (Sandalwood) ಸೂಕ್ತವಾಗಿ ಪ್ರತಿಕ್ರಿಯೆ ನೀಡಿಲ್ಲವೆಂದು ಇಂದು (ಸೆಪ್ಟೆಂಬ್ 20) ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಕಾವೇರಿ ಪರ ಹೋರಾಟಗಾರರು ಪ್ರತಿಭಟನೆ ನಡೆಸಿದ್ದಾರೆ. ಈ ಬಗ್ಗೆ ನಟ ವಿನೋದ್ ಪ್ರಭಾಕರ್ ಮಾತನಾಡಿದ್ದು, ಕಾವೇರಿ ವಿವಾದದ ಬಗ್ಗೆ ಚಿತ್ರರಂಗ ಸುಮ್ಮನೆ ಕೂತಿಲ್ಲ, ಎಲ್ಲರೂ ತಮ್ಮ-ತಮ್ಮದೇ ರೀತಿಯಲ್ಲಿ ಹೋರಾಟಗಾರರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದಿದ್ದಾರೆ. ಅಂತೆಯೇ ನಟ ದರ್ಶನ್ (Darshan), ಸುದೀಪ್, ಶಿವರಾಜ್ ಕುಮಾರ್, ಜಗ್ಗೇಶ್, ಅನಂತ್​ನಾಗ್, ಅಭಿಷೇಕ್ ಅಂಬರೀಶ್ ಇನ್ನೂ ಕೆಲವರು ಹೋರಾಟಗಗಾರರನ್ನು ಬೆಂಬಲಿಸಿ ಟ್ವೀಟ್​ಗಳನ್ನು ಮಾಡಿದ್ದಾರೆ. ರೈತರ ಪರ ನಿಲುವು ತಳೆಯುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Sep 20, 2023 10:25 PM
Loading...
Unable to load recommendations.
Follow Us